
ನನ್ನ ಮಗನಿಗೂ ಎಂಎಲ್ಎ ಟಿಕೆಟ್ ಕೇಳುವೆ ; ಯತ್ನಾಳ್

ಕಲಬುರಗಿ : ಬಿಜೆಪಿ ಹೈಕಮಾಂಡ್ ವಂಶವಾದ, ಕುಟುಂಬ ರಾಜಕಾರಣ, ಭ್ರಷ್ಟಾಚಾರ ಬೇಡ ಎಂದು ಹೇಳಿದ್ದು, ವಿಜಯೇಂದ್ರನನ್ನೇ ಮುಂದುವರಿಸಿದರೆ ನನ್ನ ಮಗನಿಗೂ ಎಂಎಲ್ಎ ಟಿಕೆಟ್ ಕೇಳುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಬಿಜೆಪಿ ಕುಟುಂಬ ರಾಜಕಾರಣ, ಹಿಂದುತ್ವ ಹಾಗೂ ಭ್ರಷ್ಟಾಚಾರ ವಿರೋಧಿಯಾಗಿದೆ. ಒಂದುವೇಳೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ನಾನು ನನ್ನ ಮಗನಿಗೆ ಟಿಕೆಟ್ ಕೇಳುವೆ. ಹಿಂದುತ್ವದಿಂದ ದೂರವಾಗಿ ಭ್ರಷ್ಟಾಚಾರ ಮಾಡುವೆ ಎಂದರು.
ವಿಜಯೇಂದ್ರ ಬಿಟ್ಟು ಬೇರೆ ಯಾವುದೇ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಡರೆ ನಾವು ಒಪ್ಪಿಕೊಳ್ಳುತ್ತೇವೆ. ಲಿಂಗಾಯತ ಅಂತ ಬಂದರೆ ನಾನೇ ಇರುವೆ. ಚುನಾವಣೆ ನಡೆಯಲಿ, ಅಧ್ಯಕ್ಷರ ಆಯ್ಕೆ ಆಗಲಿ ಎಂದು ಹೇಳಿಕೆ ನೀಡಿದರು.
ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುವೆ. ವಿಜಯೇಂದ್ರ ಕುರಿತು ನನ್ನ ಅಭಿಪ್ರಾಯ ತಿಳಿಸುವೆ. ಈಗಾಗಲೇ ನಮ್ಮ ಅನೇಕರು ದೆಹಲಿಗೆ ತೆರಳಿದ್ದಾರೆ ಎಂದು ಹೇಳಿದರು.