ಅಥಣಿ ಬಸ್ ನಿಲ್ದಾಣದಲ್ಲಿ ಶರ್ಟ್ ಬಿಚ್ಚಿ ರೀಲ್ಸ್ ಮಾಡಿದವನಿಗೆ ಬುದ್ದಿ ಕಲಿಸಿದ ಪೊಲೀಸ್ – Video
ಅಥಣಿ : ಅಥಣಿ ಬಸ್ ನಿಲ್ದಾಣದಲ್ಲಿ ಶರ್ಟ್ ಬಿಚ್ಚಿ ತನ್ನ ದೇಹವನ್ನು ಅಲ್ಲಿದ್ದ ಯುವತಿಯರಿಗೆ ತೋರಿಸಿ ರೀಲ್ಸ್ ಮಾಡಿದ್ದ ಯುವಕನಿಗೆ ಅಥಣಿ ಪೊಲೀಸರು ಸರಿಯಾದ ಬುದ್ದಿ ಕಲಿಸಿದ್ದಾರೆ. ಪೊಲೀಸ್ ಭಾಷೆಗೆ ಬುದ್ದಿ ಕಲಿತ ಯುವಕ ಇನ್ನೊಮ್ಮೆ ತಪ್ಪು ಮಾಡಲ್ವ ಸ್ವಾಮಿ ಎಂದು ಬೇಡಿಕೊಂಡಿದ್ದಾನೆ.
ಅಥಣಿ ತಾಲೂಕಿನ ಶಿನಾಳ ಗ್ರಾಮದ ಬಾಳೇಶ್ ದುರ್ಗಿ ಎಂಬ ಯುವಕ ಶರ್ಟ್ ಬಿಚ್ಚಿ ತನ್ನ ಅರ್ದ ನಗ್ನ ದೇಹವನ್ನು ಯುವತಿಯರಿಗೆ ತೋರಿಸುತ್ತಾ ರೀಲ್ಸ್ ಮಾಡಿ ತನ್ನ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿದ್ದ. ಇದನ್ನು ಗಮನಿಸಿದ ಅಥಣಿ ಪೊಲೀಸರು ಠಾಣೆಗೆ ಕರೆದು ತಮ್ಮದೇ ಶೈಲಿಯಲ್ಲಿ ಬುದ್ದಿ ಹೇಳಿದ್ದರು.
ಪೊಲೀಸರು ಕೊಟ್ಟ ಟಾನಿಕ್ ಗೆ ಯುವಕ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿ ವೀಡಿಯೋ ಅಪ್ಲೋಡ್ ಮಾಡಿದ್ದಾನೆ. ಇನ್ನೊಮ್ಮೆ ಈ ರೀತಿಯ ತಪ್ಪು ಮಾಡುವುದಿಲ್ಲ ಎಂದು ಕೈಮುಗಿದು ಕೇಳಿದ್ದಾನೆ. ಅಥಣಿ ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.d