Select Page

ಮರಗಳಿಗೆ ಕೊಡಲಿ ಏಟು ನೀಡಿದರೆ ನಮ್ಮ ಬದುಕಿಗೆ ಪೆಟ್ಟು ಕೊಟ್ಟಂತೆ : ಅಮರೇಶ್ವರ ಶ್ರೀ

ಮರಗಳಿಗೆ ಕೊಡಲಿ ಏಟು ನೀಡಿದರೆ ನಮ್ಮ ಬದುಕಿಗೆ ಪೆಟ್ಟು ಕೊಟ್ಟಂತೆ : ಅಮರೇಶ್ವರ ಶ್ರೀ

ಅಥಣಿ : ಪ್ರಕೃತಿಯ ಸೌಂದರ್ಯಕ್ಕೆ ಕೊಡಲಿ ಪೆಟ್ಟು ನೀಡಿದರೆ ನಮ್ಮೆಲ್ಲರ ಬದುಕಿಗೆ ಕೊಡಲಿ ಏಟು ನೀಡಿದಂತಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ಪರಿಸರ ಸಂರಕ್ಷಣೆಯ ಜೊತೆಗೆ ಸಸಿ ನೆಡುವ ಪಣತೊಡಬೇಕಿದೆ ಎಂದು ಕವಲಗುಡ್ಡದ ಸಿದ್ದಶ್ರೀ ಆಶ್ರಮದ ಅಮರೇಶ್ವರ ಮಹಾರಾಜರು ಕರೆ ನೀಡಿದರು.

ತಾಲ್ಲೂಕಿನ ಸಂಬರಗಿ ಗ್ರಾಮದಲ್ಲಿ ಮಂಗಳವಾರ “ಟೀಮ್ ಯೂಥ್ ಫೌಂಡೇಶನ್” ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಂಘಮಿತ್ರ ಪ್ರೌಢಶಾಲೆ ಹಾಗೂ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಪರಿಸರ ಜಾಗೃತಿಯ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ಇಂದಿನ ಯುಗದಲ್ಲಿ ಯುವ ಪೀಳಿಗೆ ಆಸಕ್ತಿ ಬೆಳಿಸಿಕೊಂಡು ಗಿಡಗಳನ್ನು ಬೆಳೆಸುವ ಸಂಕಲ್ಪ ತೊಡಬೇಕಾಗಿದೆ ಎಂದು ತಿಳಿಸಿದರು.

ಈ ದಿಶೆಯಲ್ಲಿ ಬದಲಾವಣೆಯ ಹೆಜ್ಜೆ ಹಾಕುತ್ತಿರುವ ಯೂಥ್ ಫೌಂಡೇಶನ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಇಂದಿನ ದಿನಗಳಲ್ಲಿ ನಾವೆಲ್ಲರೂ ವಿಪರೀತವಾಗಿ ಏರಿಕೆಯಾಗುತ್ತಿರುವ ತಾಪಮಾನದ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಗಾಣಿಗೇರ ಕಳವಳ ವ್ಯಕ್ತಪಡಿಸಿದರು.

ಬಯಲು ಸೀಮೆಯ ಭಾಗದಲ್ಲಿ ಹೆಚ್ಚಾಗಿ ನಾವೆಲ್ಲರೂ ಗಿಡಗಳನ್ನು ನೆಡುವ ಮೂಲಕ ಅವುಗಳ ಪಾಲನೆ ಪೋಷಣೆ ಮಾಡಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸಿ ಪರಿಸರ ಬೆಳೆಸಬೇಕೆಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಯೂಥ್ ಫೌಂಡೇಶನ್ ವತಿಯಿಂದ ವತಿಯಿಂದ ನೀಡುವ “ಆದರ್ಶ ಗ್ರಾಮಸ್ಥ” ಪ್ರಶಸ್ತಿಗೆ ಭಾಜನರಾದ ಗ್ರಾಮದ ಹಿರಿಯರಾದ ಮುರಳೀಧರ ದೇಶಪಾಂಡೆ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಶಿವಾಜಿ ಮುಂಜೆ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಾಯಕ ಬಾಗಡಿ, ಪಿಕೆಎಸ್ ಉಪಾಧ್ಯಕ್ಷ ಅಣ್ಣಾ ಸಾಹೇಬ್ ಮಿಸಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ದಳವಾಯಿ ಸೇರಿದಂತೆ ಮುಖಂಡರಾದ ಅಬ್ದುಲ್ ಮುಲ್ಲಾ, ಮಲ್ಲಿಕಾರ್ಜುನ ದಳವಾಯಿ, ಪೋಪಟ್ ನರೋಟೆ, ವಿಠ್ಠಲ ಗಸ್ತಿ, ಅಮೃತ ಮಿಸಾಳ ಹಾಗೂ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸಂಘಮಿತ್ರ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!