Select Page

ಕಕಮರಿ : ಬ್ಯಾರೆಜ್ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ

ಕಕಮರಿ : ಬ್ಯಾರೆಜ್ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ

ಕಕಮರಿ : ಪ್ರಗತಿಗೆ ಒಂದು ದ್ಯುತಕ, ಗ್ರಾಮಗಳ ಅಭಿವೃದ್ಧಿಗೆ ಅಥಣಿ ತಾಲೂಕು “ಸಣ್ಣ ನೀರಾವರಿ ಇಲಾಖೆಯಿಂದ” ಡೋಣಿ ನದಿಗೆ ಅಡ್ಡಲಾಗಿ “ಬ್ರಿಡ್ಜ್ ಕಮ್ ಬಾಂದಾರ್ ನಿರ್ಮಾಣಕ್ಕೆ” ಕಕಮರಿ ಗ್ರಾಮದ ಡೋಣಿ ನದಿ ಸ್ಥಳ ಪರಿಶೀಲನೆ.

ಈ ಸಂದರ್ಭದಲ್ಲಿ ಶ್ರೀಶೈಲ ಜನಗೌಡ (ಅಧ್ಯಕ್ಷರು ಅಥಣಿ – BKS) ಮಾತನಾಡಿ ಕಕಮರಿ ಗ್ರಾಮದಲ್ಲಿ ಬರುವ, ಕಕಮರಿ-ಕನಮಡಿ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ “ಡೋಣಿ ನದಿಗೆ ಅಡ್ಡಲಾಗಿ ಬಾಂದಾರ್ ಕಮ್ ಬ್ಯಾರೇಜ್” ನಿರ್ಮಾಣಕ್ಕೆ ಅಥಣಿ ಶಾಸಕರಾದ ಶ್ರೀ ಮಹೇಶ್ ಕುಮಟಳ್ಳಿ ಯವರ ಆದೇಶದಮೇರೆಗೆ ಬಂದಂತಹ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಶ್ರೀ ಬರತೇಶ್ ಮಹಿಷವಾಡಗಿ ಹಾಗೂ ಇನ್ನುಳಿದ ಅಧಿಕಾರಿಗಳ ಜೊತೆಗೆ ಡೋಣಿ ನದಿಯ ಸ್ಥಳಕ್ಕೆ ಭೇಟಿಯಾಗಿ ಪರಿಶೀಲಿಸಿದರು, ಜೊತೆಗೆ ಈ ಸಂದರ್ಭದಲ್ಲಿ ಶ್ರೀ ಬಾಬಾಗೌಡ ಪಾಟೀಲ್, ಶ್ರೀ ಅಣ್ಣಪ್ಪಾ ತಂಗಡಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕಲ್ಲಪ್ಪ ತಂಗಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಈ ಯೋಜನೆಯಿಂದ ಎರಡು ಗ್ರಾಮಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ಲಕ್ಷಾಂತರ ದಿಂಡಿ ಯಾತ್ರಿಕರಿಗೆ ಈ ಯೋಜನೆಯಿಂದ ನದಿ ದಾಟಲು ತುಂಬಾನೇ ಅನಕೂಲವಾಗುವದರ ಜೊತೆಗೆ ಪ್ರಮುಖವಾಗಿ ಈ ಭಾಗದ ರೈತರಿಗೆ ಬೋರವೆಲ್ ಹಾಗೂ ಬಾವಿಗಳಿಗೂ ವಳ ನೀರಿನ ಹರಿವು ಹೆಚ್ಚಾಗುವದರಿಂದ, ನೀರಿನ ಅಭಾವವನ್ನು ತಪ್ಪಿಸಿದಂತ್ತಾಗುತ್ತದೆ ಎಂದು ಹೇಳಿದರು. ಸುಮಾರು ದಶಕಗಳ ನಮ್ಮ ಬೇಡಿಕೆಗೆ ಸ್ಪಂದಿಸಿದ ಅಥಣಿ ಶಾಸಕರಾದ ಶ್ರೀ ಮಹೇಶ್ ಕುಮಟಳ್ಳಿಯವರಿಗೂ ಹಾಗೂ ಮೇಲಾಧಿಕಾರಿಗಳಿಗೂ ಧನ್ಯವಾದಗಳನ್ನು ತಿಳಿಸಿದರು.

ಭಾರತೀಯ ಕಿಸಾನ್ ಸಂಘ- ಕರ್ನಾಟಕ ಪ್ರದೇಶ (ಅಥಣಿ ತಾಲೂಕು) ಘಟಕದ ಬೇಡಿಕೆಗೆ ಸ್ಪಂದಿಸಿದ ಶಾಸಕರಿಗೆ ಧನ್ಯವಾದಗಳನ್ನ ತಿಳಿಸಿ ಈ ಯೋಜನೆ ಕೆಲಸ ಆದಷ್ಟು ಬೇಗನೆ ಪ್ರಾರಂಭವಾಗಲೆಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

Leave a reply

Your email address will not be published. Required fields are marked *

error: Content is protected !!