ಬೆಂಗಳೂರು : ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸ್ ಹೋಗುವುದಿಲ್ಲ. ರಾಜ್ಯದ ಬಹುತೇಕ ಶಾಸಕರಿಗೆ ಬೆಂಗಳೂರಿನಲ್ಲಿ ಮನೆ ಇದೆ, ಹಲವು ಶಾಸಕರು ಬೆಂಗಳೂರಿಗೆ ಬಂದು ಎರಡು ಮದುವೆಯಾಗಿದ್ದಾರೆ ಎಂದು ಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತಾದ ಚರ್ಚೆಯ ವೇಳೆ ಶಾಸಕರ ವೈಯಕ್ತಿಕ ಬದುಕಿನ ಕುರಿತು ಆಡಿದ ಮಾತುಗಳು ಸಧ್ಯ ಚರ್ಚೆಗೆ ಗ್ರಾಸವಾಗಿವೆ.‌ ನಾನು ಹೇಳುವುದು ಸತ್ಯ ಬೆಂಗಳೂರಿಗೆ ಬಂದ ಅನೇಕ ಶಾಸಕರು ಎರಡು ಮದುವೆ ಆಗಿದ್ದಾರೆ. ಅಂತವರ ಡಜನ್‌ಗಟ್ಟಲೆ ಲಿಸ್ಟ್ ನನ್ನ ಬಳಿ ಇದೆ ಎಂದಿದ್ದಾರೆ.

ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿ‌ ಎಲ್ಲಾ ಜಿಲ್ಲೆಗಳಿಂದ ಬಂದವರ ಇತಿಹಾಸ ‌ನಾನು ಹೇಳಬಲ್ಲೇ, ಆದರೆ ಈಗ ಆ ಇತಿಹಾಸ ಬಿಚ್ಚಿಡುವುದು ಬೇಡ ಎಂದರು.