ರಾಹುಲ್ ಗಾಂಧಿಗೆ ಇಷ್ಟಲಿಂಗ ಪೂಜಾ ವಿಧಾನ ವಿವರಿಸಿದ ಮುರುಘಾ ಶ್ರೀ
ಚಿತ್ರದುರ್ಗ : ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಅವರಿಗೆ ಮುರುಘಾ ಶ್ರೀಗಳು ಹಣೆಗೆ ವಿಭೂತಿ ಹಚ್ಚಿ ಲಿಂಗಧಾರಣೆ ಮಾಡಿ ಲಿಂಗದೀಕ್ಷೆ ನೀಡಿದರು.
ಮಠಕ್ಕೆ ಭೇಟಿ ನೀಡಿದ ಸಂದರ್ಭ ರಾಹುಲ್ ಗಾಂಧಿಯವರು ಮಠದ ಕರ್ತೃ ಮುರಿಗಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಪುಷ್ಪಾರ್ಚನೆ ಮಾಡಿ ಧ್ಯಾನ ಮಾಡಿದರು. ನಂತರ ಶಿವಮೂರ್ತಿ ಮುರುಘಾ ಶರಣರಿಗೆ ಇಷ್ಟ ಲಿಂಗ ಬಗ್ಗೆ ಮಾಹಿತಿ ಕೇಳಿದರಂತೆ.
ಅವರು ಲಿಂಗ ಪೂಜೆ ಮಹತ್ವ ಬಗ್ಗೆ ವಿವರಿಸಿದರು. ಆಗ ರಾಹುಲ್ ಗಾಂಧಿ ನಾವು ಕೂಡ ಲಿಂಗ ದೀಕ್ಷೆ ಪಡೆದುಕೊಳ್ಳುವುದಾಗಿ ಹೇಳಿದರು. ಲಿಂಗಪೂಜೆ ಇತ್ಯಾದಿಗಳ ಕುರಿತು ತರಬೇತಿ ನೀಡಲು ಯಾರನ್ನಾದರೂ ದೆಹಲಿಗೆ ಕಳುಹಿಸಲು ರಾಹುಲ್ ಗಾಂಧಿ ಕೋರಿಕೆ ಇಟ್ಟರು.