Video – ಕತ್ತಿ ಕುಟುಂಬವನ್ನು ಮಲ್ಲಪ್ಪಶೆಟ್ಟಿಗೆ ಹೋಲಿಸಿ ನಾಲಿಗೆ ಹರಿಬಿಟ್ಟ ಕಾಶಪ್ಪನವರ್
ಹುಕ್ಕೇರಿ : ಪಂಚಮಸಾಲಿ 2 ಎ ಮೀಸಲಾತಿ ಹೋರಾಟದ ಭಾಗವಾಗಿ ಶುಕ್ರವಾರ ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಬೇಕು ಎಂಬ ಹೇಳಿಕೆ ಮಧ್ಯೆ ಹುಕ್ಕೇರಿಯಲ್ಲಿ ಪಂಚಮಸಾಲಿ ಸಮುದಾಯದವರು ಶಾಸಕ ಆಗಬೇಕು ಎಂದು ಕಾಶಪ್ಪನವರ್ ಬಹಿರಂಗವಾಗಿ ಹೇಳಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಂಸದ ರಮೇಶ್ ಕತ್ತಿ ಪುತ್ರ ಪೃಥ್ವಿ ಕತ್ತಿ ರಾಜಕಾರಣ ಬಿಟ್ಟು ಕೇವಲ ಮೀಸಲಾತಿ ಕುರಿತು ಮಾತನಾಡಿ ಎಂದರು.
ಇಷ್ಟಕ್ಕೆ ಸುಮ್ಮನಾಗದ ಕಾಶಪ್ಪನವರ್ ಎಂದಿನಂತೆ ತಮ್ಮ ನಾಲಿಗೆ ಹರಿಬಿಟ್ಟಿದ್ದು ನಾನು ಸಚಿವನ ಮಗ ತಾಕತ್ ಇದೆ. ಚುನಾವಣೆಯಲ್ಲಿ ತೋರಿಸುವೆ ಎಂದರು. ಜೊತೆಗೆ ಮಲ್ಲಪ್ಪಶೆಟ್ಟಿಗಳು ಚನ್ನಮ್ಮ ಕಾಲದಲ್ಲಿ ಇದ್ದರು ಈಗಲೂ ಇದ್ದಾರೆ ಎಂದು ಹೇಳುವ ಮೂಲಕ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.