ಪೀಪಲ್ ಟ್ರೀ ಶಿಕ್ಷಣ ಸಂಸ್ಥೆಯ ಪದವಿ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ ಆಯೋಜನೆ
ಬೆಳಗಾವಿ : ಪೀಪಲ್ ಟ್ರೀ ಶಿಕ್ಷಣ ಸಂಸ್ಥೆಯ ಬಿಬಿಎ, ಬಿಸಿಎ ಹಾಗೂ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಕೂಟ ಹಾಗೂ ಘಟಿಕೋತ್ಸವ ಸಮಾರಂಭ ಮಂಗಳವಾರ ನಗರದ ಮಿಲೇನಿಯಮ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ. ಉಮಾ ಸಾಲಿಗೌಡರ್ ಮಾತನಾಡಿ. ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿಜೀವನದ ಬದುಕನ್ನು ರೂಪಿಸಲು ಈ ಮಹಾವಿದ್ಯಾಲಯವು ಕಳೆದ 15 ವರ್ಷಗಳಿಂದ ಶ್ರಮಿಸುತ್ತಿದೆ. ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು ಎಂದರು.
ಪೀಪಲ್ ಟ್ರೀ ಎಜುಕೇಶನ್ ಸೊಸೈಟಿಯ ಡೀನ್ ಸಂತೋಷ್ ಎಂ ಗುರುವಯ್ಯನವರ್ ಮಾತನಾಡಿ. ವಿದ್ಯಾರ್ಥಿಗಳು ನಮ್ಮ ದೇಶದ ಭವಿಷ್ಯ. ಮುಂಬರುವ ದಿನಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಯನ್ನು ಈ ಸಮಾಜಕ್ಕೆ ಸಲ್ಲಿಸಬೇಕು ಎಂದರು.
ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಪೀಪಲ್ ಟ್ರೀ ಎಜುಕೇಶನ ಸೊಸೈಟಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ಲಕ್ಷ ರೂ. ವಿದ್ಯಾರ್ಥಿವೇತನವನ್ನು ದಿ.ಜಗದೀಶ ಸವದತ್ತಿಯವರ ಸ್ಮರಣಾರ್ಥ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅವಿನಾಶ್ ಅಕ್ಕಿ-ಪದವಿ ಪ್ರಾಂಶುಪಾಲರು, ಶ್ರೀ ಪ್ರವೀಣ್ ಪ್ಯಾಟಿ-ಪಿಯು ಪ್ರಾಂಶುಪಾಲರು, ಶ್ರೀಮತಿ ಅಂಜಲಿ ಅಗರ್ವಾಲ್-ಬಿಬಿಎ ವಿಭಾಗ ಮುಖ್ಯಸ್ಥರು, ಶ್ರೀ ಪ್ರಶಾಂತ್ ಹಿರೇಮಠ-ಬಿಕಾಂ ವಿಭಾಗದ ಮುಖ್ಯಸ್ಥರು ಮತ್ತು ಬೋಧಕ,ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.