VIDEO – ಮಂಡಿ ನೋವಿನ ಚಿಕಿತ್ಸೆ ಪಡೆದ ಸಿಎಂ ಬೊಮ್ಮಾಯಿ
ಬೆಳಗಾವಿ : ಮಂಡಿ ನೋವಿನಿಂದ ಬಳಲುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿ ನಾಟಿ ವೈದ್ಯರ ಮೊರೆ ಹೋಗಿದ್ದು ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಸುಮಾರು ಹತ್ತು ದಿನಗಳ ವರೆಗೆ ಚಿಕಿತ್ಸೆ ಪಡೆದಿದ್ದಾರೆ.
ಮೈಸೂರು ಮೂಲದ ನಾಟಿವೈದ್ಯ ಲೋಕೇಶ್ ಟೇಕಲ್ ಎಂಬುವರು ಸಿಎಂಗೆ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಚಳಿಗಾಲದ ಅಧಿವೇಶನ ಹಿನ್ನಲೆಯಲ್ಲಿ ನಗರದ ವಿಟಿಯು ಗೆಸ್ಟ್ ಹೌಸ್ ನಲ್ಲಿ ತಂದಿದ್ದರು. ಈ ಸಂದರ್ಭದಲ್ಲಿ ವೈದ್ಯ ಲೋಕೇಶ್ ಸಿಎಂ ಬೊಮ್ಮಾಯಿಯವರಿಗೆ ಮಂಡಿ ನೋವಿನ ಚಿಕಿತ್ಸೆ ನೀಡಿದ್ದಾರೆ. ಈ ಹಿಂದೆ ಮಂಡಿ ನೋವಿನ ಚಿಕಿತ್ಸೆಗೆಂದು ಸಿಎಂ ಬೊಮ್ಮಾಯಿ ಬೇರೆ ದೇಶಕ್ಕೆ ಹೋಗಲಿದ್ದಾರೆ ಎಂದು ಕೇಳಿಬಂದಿತ್ತು ಆದರೆ ಸಿಎಂ ಮಾತ್ರ ನಾಟಿ ವೈದ್ಯರ ಮೊರೆ ಹೋಗಿದ್ದಾರೆ.
ಚರ್ಮ ರೋಗದಿಂದ ಬಳಲುತಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೂ ನಾಟಿವೈದ್ಯ ಲೋಕೇಶ್ ಟೇಕಲ್ ಚಿಕಿತ್ಸೆ ನೀಡಿ ರೋಗ ಗುಣಪಡಿಸಿದ್ದರು. ಈ ಹಿನ್ನಲೆಯಲ್ಲಿ ಅಧಿವೇಶನ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿಯವರಿಗೂ ನಾಟಿ ವೈದ್ಯರ ಸಂಪರ್ಕ ಮಾಡಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವನಸ್ಪತಿ ಔಷಧಿಯ ಮೂಲಕ ನಾಟಿ ವೈದ್ಯ ಲೋಕೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.