ಹಿಂಡಲಗಾ ಕಾರಾಗೃಹ ಕಲಿಕಾ ಕೇಂದ್ರಕ್ಕೆ ಸುಷ್ಮಾ ಗೋಡಬೋಲೆ ಭೇಟಿ
ಬೆಳಗಾವಿ : ಕೇಂದ್ರ ಕಾರಾಗೃಹದಲ್ಲಿ ಕಲಿಕೆಯಿಂದ ಬದಲಾವಣೆ ಶಿರ್ಷಿಕೆ ಅಡಿಯಲ್ಲಿ ಆರಂಭಿಸಲಾದ ಕಲಿಕಾ ಕೇಂದ್ರಗಳಿಗೆ ಬೆಂಗಳೂರಿನ ಲೋಕ ಶಿಕ್ಷಣ ನಿರ್ದೇಶಾನಾಲಯದ ನಿರ್ದೇಶಕರಾದ ಸುಷ್ಮಾ ಗೋಡಬೋಲೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.
ಮಂಗಳವಾರ ನಗರದ ಹಿಂಡಲಗಾ ಕಾರ್ಯಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಇವರು. ತಾವೆಲ್ಲ ಜೀವನದಲ್ಲಿ ಯಾವುದೋ ಆಕಸ್ಮಿಕ ಘಟನೆಯ ನಿಮಿತ್ಯ ಈ ಕಾರಾಗೃಕ್ಕೆ ಬಂದಿರುವಿರಿ. ಆದ್ದರಿಂದ ಇಲ್ಲಿರುವ ಸಮಯ ತಮಗೆಲ್ಲ ಅತೀ ಮಹತ್ವದ್ದು ಆಗಿದೆ. ಆದ್ದರಿಂದ ತಾವು ಇಂತಹ ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಾರಾಗೃಹದ ವಿದ್ಯಾವಂತ ನಿವಾಸಿಗಳು ತಮ್ಮ ಬ್ಯಾರಕ್‌ನಲ್ಲಿರುವ ಇತರ ಅನಕ್ಷರಸ್ಥ ನಿವಾಸಿಗಳಿಗೆ ಅಕ್ಷರಾಭ್ಯಾಸ ಮಾಡಿಸಬೇಕು. ಈ ರೀತಿಯಾದ ಕಾರ್ಯವನ್ನು ಕೈಕೊಂಡು ಅನಕ್ಷರತೆಯನ್ನು ಹೊಗಲಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಜಯಶ್ರೀ ಎ. ಎಮ್ ಮಾತನಾಡಿ. ಇಲಾಖೆಯ ಉದ್ದೇಶದ ಕುರಿತು ನಿವಾಸಿಗಳ ರೂಪಕ ಅತ್ಯಂತ ಮನ ಮುಟ್ಟುವಂತೆ ಪ್ರದರ್ಶನವಾಗಿದೆ. ಹಾಗೂ ಈ ಕಲಿಕೆಯಿಂದ ಬದಲಾವಣೆ ಕಾರ್ಯಕ್ರಮ ಯಶಸ್ವಿಗೆ ಇಲಾಖೆ ಸದಾಕಾಲ ಸಿದ್ದ ಎಂದು ಹೇಳಿದರು. ಅಧ್ಯಕ್ಷತೆ ವಹಸಿದ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೃಷ್ಣಕುಮಾರ ಮಾತನಾಡಿ, ಕಾರಾಗೃಹ ಇಲಾಖೆಯ ಕಲಿಕೆಯಿಂದ ಬದಲಾವಣೆ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ರೀತಿಯ ಸಹಕಾರವು ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಖಾಜಿ ತಾಲೂಕಾ ಸಂಯೋಜಿಕರಾದ ಹನಮಂತ ಭಜಂತ್ರಿ, ರಾಜಕುಮಾರ ಕುಂಬಾರ ಹಾಗೂ ಜೈಲರ್ ಅಭಿಷೇಕ ಉಪಸ್ಥಿತರಿದ್ದರು.