ಖಾನಾಪುರ : ಮತದಾರರ ಸೆಳೆಯಲು ಶುರುವಾಯ್ತು ಕಸರತ್ತು : ಉಚಿತ ಟಿಫಿನ್ ಬಾಕ್ಸ್ಗೆ ಮುಗಿಬಿದ್ದ ಜನ
ಬೆಳಗಾವಿ : ಮುಂಬರುವ ಕರ್ನಾಟಕ ಸಾರ್ವತ್ರಿಕ ಚುನಾವಣೆ ತಯಾರಿಗೆ ಆಗಿನಿಂದಲೇ ತಯಾರಿ ನಡೆದಂತೆ ಕಾಣುತ್ತಿದೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದ ಕಾರ್ಯಕ್ರಮದಲ್ಲಿ ಹಂಚುತ್ತಿದ್ದ ಉಚಿತ ಟಿಫಿನ್ ಬಾಕ್ಸ್ ಗಾಗಿ ಜನರು ಮುಗಿಬಿದ್ದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಬೀಡಿ ಗ್ರಾಮದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ನವ ದುರ್ಗಾ ಹಳದಿ ಕುಂಕುಮ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಮುಗಿದ ಬಳಿಕ ಶಾಸಕಿ ಅಂಜಲಿ ನಿಂಬಾಳ್ಕರ್ ನೆರೆದಿದ್ದ ಮಹಿಳೆಯರಿಗೆ ಉಚಿತ ಟಿಫಿನ್ ಬಾಕ್ಸ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತ ಮಹಿಳೆಯರು ಟಿಫಿನ್ ಬಾಕ್ಸ್ ಪಡೆಯಲು ಮುಗಿಬಿಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಸೋನಾಲಿ ಸರ್ನೋಬ್, ಖಾನಾಪೂರ ಕ್ಷೇತ್ರದಲ್ಲಿ ಟಿಫಿನ್ ಬಾಕ್ಸ್ ಅಷ್ಟೇ ಅಲ್ಲ ಸೀರೆಗಳನ್ನು ಹಂಚಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.