ಪೀಡೆ ತೊಲಗಿದೆ – ಕುತಂತ್ರಿ ಡಿಕೆಶಿ ಕರೆದೊಯ್ದ : ಸವದಿ ವಿರುದ್ಧ ಸಾಹುಕಾರ್ ವಾಗ್ದಾಳಿ
ಬೆಳಗಾವಿ : ಚುನಾವಣೆಯಲ್ಲಿ ಸೋತ ವ್ಯಕ್ತಿಯನ್ನು ಬಿಜೆಪಿ ಡಿಸಿಎಂ ಮಾಡಿತ್ತು, ಆದರೆ ಪಕ್ಷನಿಷ್ಠೆ ತೋರಿಸದ ಸವದಿ ಪಕ್ಷ ಬಿಟಿಟಿದ್ದಾನೆ. ಕುತಂತ್ರಿ ಡಿ.ಕೆ ಶಿವಕುಮಾರ್ ವಿಶೇಷ ವಿಮಾನದಲ್ಲಿ ಕರೆದುಕೊಂಡಿ ಹೋಗಿದ್ದು ಪೀಡೆ ತೊಲಗಿದೆ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಅಥಣಿ ಪಟ್ಟಣದಲ್ಲಿ ನಡೆದ ಸಾರ್ವಜನಿಕರ ಸಭೆ ಉದ್ದೇಶಿಸಿ ಮಾತನಾಡಿದ ಇವರು. ನಾನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂದು ಸವದಿ ತಲೆಯಲ್ಲಿ ಇತ್ತು. ಆದರೆ ಸಚಿವ ಸ್ಥಾನ ಸಿಗದಿದ್ದರು ಬಿಜೆಪಿ ಬಿಟ್ಟಿಲ್ಲ. ಸವದಿ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಈಗ ಅಧಿಕಾರದ ಆಸೆಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ನಮ್ಮ ಪಕ್ಷದಲ್ಲಿದ್ದ ಪೀಡೆ ತೊಲಗಿದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಕಳೆದ ಎಂಎಲ್ಸಿ ಚುನಾವಣೆಯಲ್ಲಿಯೇ ಲಕ್ಷ್ಮಣ ಸವದಿ ಮತ್ತು ಡಿಕೆಶಿ ಅವರ ಮೈತ್ರಿ ಆಗಿದೆ. ಅಂದಿನಿಂದ ಕುತಂತ್ರ ರಾಜಕಾರಣ ಮಾಡುತ್ತಲೇ ಇದ್ದರು. ಕಪಟ ಮನಸಿನ ಸವದಿ ಬಿಜೆಪಿಯಿಂದ ಹೊರಗೆ ಹೋಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಭಾರತೀಯ ಜನತಾ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ಮಹೇಶ ಕುಮಟಳ್ಳಿ ಅವರನ್ನು ಗೆಲ್ಲಿಸಬೇಕು. ಲಕ್ಷ್ಮಣ ಸವದಿ ಸಾಕಷ್ಟು ದುಡ್ಡು ಇರುವ ಸಾಹುಕಾರ, ದುಡ್ಡು ಹಂಚಿ ಮತ ಕೇಳಬಹುದು, ನೀವೆಲ್ಲರೂ ಗಟ್ಟಿಯಾಗಿ ನೀವು ಯಾವುದೇ ಆಸೆ ಹಾಗೂ ಒತ್ತಡಕ್ಕೆ ಒಳಗಾಗದೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಹೇಶ ಕುಮ್ಟಳ್ಳಿ ಅವರನ್ನ ಬೆಂಬಲಿಸಬೇಕು. ಪಿಕೆಪಿಎಸ್ ಸಿಬ್ಬಂದಿ ಹಾಗೂ ಶೇರು ಹೊಂದಿದ ಸದಸ್ಯರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ಒಂದು ವೇಳೆ ಒತ್ತಡಕ್ಕೆ ಒಳಗಾದರೆ ಮುಂಬರುವ ದಿನಗಳಲ್ಲಿ ಅಡಿಟ್ ಮಾಡಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದರು.
ಸವದಿ ಬಿಜೆಪಿ ತೊರೆದಿದ್ದು ನನಗೆ ತುಂಬಾ ಸಂತೋಷ ಆಗಿದೆ. ಆತ ಪಕ್ಷಕ್ಕೆ ನಿಷ್ಠನಾಗು ಉಳಿಯಲಿಲ್ಲ. ಅಥಣಿಯಲ್ಲಿ ಮಹೇಶ್ ಕುಮಠಳ್ಳಿ ಹಾಗೂ ಬೆಳಗಾವಿ ಗ್ರಾಮೀಣದಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ್ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವೆ. ಕ್ಷೇತ್ರದಲ್ಲಿರುವ ರೈತರ ಸಮಸ್ಯೆಗೆ ಪರಿಹಾರ ಕೊಡಿಸುವೆ. ಇಲ್ಲಿನ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕಾಗವಾಡ ಹಾಗೂ ಅಥಣಿ ಗೆಲುವಿಗೆ ತಾವೆಲ್ಲ ಆಶಿರ್ವಾದ ಮಾಡಬೇಕು ಎಂದರು.