ಕೆಜಿಎಫ್ ಚಿತ್ರ ನೋಡಿ ಸಿಗರೆಟ್ ಸೇದಿದ ಬಾಲಕ ಆಸ್ಪತ್ರೆಗೆ ದಾಖಲು
ಹೈದರಾಬಾದ್ : ಯಶ್ ಅಭಿನಯದ ಕೆಜಿಎಫ್ – 2 ಚಲನಚಿತ್ರದಲ್ಲಿ ನಾಯಕನಟ ಸೇದುವ ಸಿಗರೆಟ್ ನೋಡಿ ಒಂದು ಪ್ಯಾಕ್ ಸಿಗರೆಟ್ ಸೇದಿ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಕಳೆದ 2 ದಿನಗಳಲ್ಲಿ 2 – 3 ಬಾರಿ ವೀಕ್ಷಿಸಿದ ನಂತರ ಒಮ್ಮೆಲೆ ಒಂದು ಬಾರಿ ಒಂದು ಪ್ಯಾಕ್ ಸಿಗರೆಟ್ ಸೇದಿ ತೀವ್ರ ಗಂಟಲು ನೋವು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ಬಾಲಕನ ಆರೋಗ್ಯ ಸುಧಾರಿಸಿದೆ.
ಆದರೆ ಈ ಜನರು ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ವೈದ್ಯರು ಈ ರೀತಿಯ ಪಾತ್ರಗಳಿಂದ ಸಮಾಜದಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮದ್ಯ ಸೇವನೆ, ತಂಬಾಕು ಹಾಗೂ ಮಾದಕವಸ್ತುಗಳ ಬಳಕೆಯನ್ನು ವೈಭವೀಕರಿಸುವುದನ್ನು ತಡೆಯಬೇಕು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.