ಯುಪಿಎಸ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸಾಹಿತ್ಯ ಆಲದಕಟ್ಟಿಗೆ 10 ನೇ ರ್ಯಾಂಕ
ಬೈಲಹೊಂಗಲ : ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಯುವತಿ ಸಾಹಿತ್ಯ ಆಲದಕಟ್ಟಿ ರಾಜ್ಯಕ್ಕೆ 10 ನೇ ಸ್ಥಾನ ಪಡೆದು ತೇರ್ಗಡೆಯಾಗಿದ್ದಾರೆ
ಸಾಹಿತ್ಯ ತಮ್ಮ ಪಿಯುಸಿ ಶಿಕ್ಷಣವನ್ನು ಕಿತ್ತೂರಿನ ರಾಣಿ ಚೆನ್ನಮ್ಮ ಮಹಿಳಾ ವಸತಿ ವಿದ್ಯಾಲಯದಲ್ಲಿ ಪೂರೈಸಿ ನಂತರ ಎಂಜಿನಿಯರಿಂಗ್ ಪದವಿಯನ್ನು ಹುಬ್ಬಳ್ಳಿಯ ಬಿವಿಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಪಡೆದಿದ್ದಾರೆ. ಒಂದು ವರ್ಷಗಳ ಕಾಲ ದೆಹಲಿಯಲ್ಲಿ ಐಎಎಸ್ ತರಬೇತಿ ಪಡೆದ ಸಾಹಿತ್ಯ ಇಂದು ಪ್ರಕಟಗೊಂಡ ಯುಪಿಎಸ್ಸಿ ಫಲಿತಾಂಶದಲ್ಲಿ ದೇಶಕ್ಕೆ 250, ಹಾಗೂ ರಾಜ್ಯಕ್ಕೆ 10 ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.