
ಸತತ ಸೋಲಿನಿಂದ ಕಂಗಾಲಾದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ಕಳೆದ ಎರಡು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ನಿಖಿಲ್ ಕುಮಾರಸ್ವಾಮಿಗೆ ಕೊನೆಗೂ ಅದೃಷ್ಟ ಕೈ ಹಿಡಿದಿಲ್ಲ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಅಘಾತ ಎದುರಾಗಿದೆ.
ಚನ್ನಪಟ್ಟಣ ಉಪ ಚುನಾವಣೆ ಮತ ಎಣಿಕೆ ಕಾರ್ಯ ಭಾಗಶಃ ಮುಕ್ತಾಯದ ಹಂತ ತಲುಪಿದ್ದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಳೆದ 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯದಿಂದ ಸ್ಪರ್ಧಿಸಿ ನಿಖಿಲ್ ಸೋತಿದ್ದರು. ನಂತರ 2019 ರಲ್ಲಿ ಅವರ ತಾಯಿ ಪ್ರತಿನಿಧಿಸಿದ್ದ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಸಧ್ಯ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್, ಶಿಗ್ಗಾಂವಿ ಯಾಸೀರ್ ಪಠಾಣ್, ಹಾಗೂ ಸಂಡೂರಿನಲ್ಲಿ ಅಣ್ಣಪೂರ್ಣ ತುಕಾರಾಂ ಅವರು ಗೆಲುವು ಸಾಧಿಸಿದ್ದು ಘೋಷಣೆ ಮಾತ್ರ ಬಾಕಿ ಇದೆ.