
ಅರ್ಧದಿನಕ್ಕೆ ಮಾರಾಟವಾದ ಮದ್ಯ ಎಷ್ಟು..? ಎಣ್ಣೆ ಕಿಕ್ಕ್ ನಲ್ಲಿ ತೇಲಾಡಿದ ಯುವ ಸಮೂಹ

ಬೆಂಗಳೂರು : ಡಿಸೆಂಬರ್ 31 ರ ಮಧ್ಯರಾತ್ರಿ 2 ಗಂಟೆಗಳ ವರೆಗೆ ಮಾರಾಟವಾದ ಮದ್ಯ ಎಷ್ಟು ಎಂಬುದರ ಅಂಕಿಅಂಶ ಕೇಳಿದರೆ ತಿಳಿಯುತ್ತೆ ಬೆಂಗಳೂರಿನಲ್ಲಿ ಎಷ್ಟು ಭರ್ಜರಿ ಪಾರ್ಟಿ ಆಗಿರಬೇಕೆಂದು.
ಹೊಸ ವರ್ಷವನ್ನು ಬೆಂಗಳೂರಿನ ಜನ ಸಡಗರದಿಂದ ಬರಮಾಡಿಕೊಂಡಿದ್ದಾರೆ. ನಗರದ ರೆಸ್ಟೋರೆಂಟ್, ಪಬ್, ಬಾರ್ ಗಳಲ್ಲಿ ಯುವ ಸಮೂಹ ಎಣ್ಣೆ ಹೊಡೆದು ಕುಣಿದು ಕುಪ್ಪಳಿಸಿದೆ. ಅಚ್ಚರಿ ವಿಷಯವೆಂದರೆ ಡಿ. 31 ರ ಮಧ್ಯರಾತ್ರಿ ವರೆಗೆ ನಡೆದ ಮದ್ಯ ಮಾರಾಟ ಕೋಟ್ಯಾಂತರ ಲೆಕ್ಕದಲ್ಲಿದೆ.
ಡಿಸೆಂಬರ್ 31 ರ ಮಧ್ಯರಾತ್ರಿ ( 2 ಗಂಟೆಯವರೆಗೆ ) 308 ಕೋಟಿ ರು. ವರೆಗೆ ಮದ್ಯ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಕರ್ನಾಟಕ ಕಾರ್ಯದರ್ಶಿ ಗೋವಿಂದರಾಜ ಹೆಗಡೆ ಮಾಹಿತಿ ನೀಡಿದ್ದಾರೆ.
ಕೇವಲ ಅರ್ಧ ದಿನಕ್ಕೆ 4,83,705 ಬಾಕ್ಸ್, ಬಿಯರ್ – 2,92,3339 ಬಾಕ್ಸ್, ಒಟ್ಟು 76,0462 ಪೆಟ್ಟಿಗೆ ಮದ್ಯ ಮಾರಾಟವಾಗಿದ್ದು 308 ಕೋಟಿ ರು. ಇದರ ಮೌಲ್ಯವಾಗಿದೆ ಎಂದು ತಿಳಿಸಿದ್ದಾರೆ.