
ಹೊಸ ವರ್ಷ ತರಲಿ ಹರುಷ ; ಬೆಳಗಾವಿಯಲ್ಲಿ ಹೇಗಿತ್ತು ಆಚರಣೆ

ಬೆಳಗಾವಿ : ಕ್ಯಾಲೆಂಡರ್ ವರ್ಷದ ಮೊದಲ ದಿನ ಇಂದಿನಿಂದ ಶುರುವಾಗಿದೆ. ಪ್ರತಿಯೊಬ್ಬರಿಗೂ ಈ ವರ್ಷ ಹೊಸ ಹುರುಪು ತರಲಿ. ಆಯುಷ್ಯ ಹಾಗೂ ಉತ್ತಮ ಆರೋಗ್ಯ ನಿಮ್ಮದಾಗಲಿ. ಹಿಂದಿನ ಕಹಿ ಘಟನೆ ಮರೆತು ಹೊಸ ಚಿಂತನೆಯೊಂದಿಗೆ ಸಾಗಿ ಎಂದು ಆಶಿಸುತ್ತಾ “ ಬೆಳಗಾವಿ ವಾಯ್ಸ್ ” ಓದುಗರಿಗೆ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷಾಂತ್ಯದ ಕೊನೆಯ ದಿನವನ್ನು ನಗರದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕುಣಿದು ಕುಪ್ಪಳಿಸುವ ಮೂಲಕ ಯುವ ಸಮೂಹ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದರು. ನಗರದ ಪ್ರತಿಷ್ಠಿತ ಬಾರ್ ಜಾಗೂ ರೆಸ್ಟೋರೆಂಟ್ ಗಳು ಜನರಿಂದ ತುಂಬಿ ತುಳುಕಿದವು.
ಬೆಳಗಾವಿಯಲ್ಲಿ ಮತ್ತೊಂದು ವಿಭಿನ್ನ ಸಂಪ್ರದಾಯ ಇದೆ. ಹಳೆ ಮನುಷ್ಯರನ್ನು ಹೋಲುವ ಗೊಂಬೆಗಳನ್ನು ಸುಟ್ಟು ಹಾಕುವ ಮೂಲಕ ಹೊಸ ವರ್ಷ ಬರಮಾಡಿಕೊಳ್ಳುವ ಸಂಪ್ರದಾಯ. ಕಹಿ ನೆನಪು ಸುಟ್ಟು ಹಾಕಲು ಒಲ್ಡ್ ಮ್ಯಾನ್ ಗೆ ಬೆಂಕಿ ಇಡುವುದು ಇಲ್ಲಿನ ವಿನೂತನ ಸಂಪ್ರದಾಯ.