
ಯತ್ನಾಳ್, ಎಂ. ಬಿ ಪಾಟೀಲರಿಗೆ ಸಿದ್ದೇಶ್ವರ ಶ್ರೀಗಳೆಂದರೆ ಪ್ರಾಣ

ವಿಜಯಪುರ : ಸಾಮಾನ್ಯವಾಗಿ ರಾಜಕಾರಣಿಗಳು ಮಠಾಧೀಶರನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದರಲ್ಲಿ ಹವಣಿಸುತ್ತಾರೆ. ಆದರೆ ಈ ಸಂತನ ಮುಂದೆ ನಿಲ್ಲಲು ದೊಡ್ಡವರು ಹಿಂದೆಮುಂದೆ ನೋಡುವ ಪರಿಸ್ಥಿತಿ ಇದ್ದರೆ ಅದು ಸಿದ್ದೇಶ್ವರ ಶ್ರೀಗಳಿಂದ ಮಾತ್ರ.

ಹೌದು ವಿಜಯಪುರದ ಪ್ರಭಾವಿ ರಾಜಕಾರಣಿಗಳಲ್ಲಿ ಎಂ.ಬಿ ಪಾಟೀಲ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್. ಈ ಇಬ್ಬರಿಗೂ ಸಿದ್ದೇಶ್ವರ ಶ್ರೀ ಎಂದರೆ ಅಚ್ಚುಮೆಚ್ಚು. ಶ್ರೀಗಳು ಹಾಕಿದ್ದ ಗೆರೆಯನ್ನು ಯಾವತ್ತೂ ದಾಟುವ ಕೆಲಸ ಮಾಡಿಲ್ಲ. ಅಷ್ಟೇ ಅಲ್ಲದೆ ಶ್ರೀಗಳ ಹೆಸರು ಬಳಸಿಕೊಂಡು ತಮ್ಮ ರಾಜಕೀಯ ಲಾಭ ಮಾಡಿಕೊಳ್ಳಲು ಯಾವತ್ತೂ ಪ್ರಯತ್ನಿಸಲಿಲ್ಲ, ಇದೇ ಕಾರಣಕ್ಕೆ ಶ್ರೀಗಳಿಗೂ ಈ ಇಬ್ಬರ ಮೇಲೆ ಯಾವಾಗಲೂ ವಿಶೇಷ ಅಭಿಮಾನ ಇತ್ತು.

ನಿನ್ನೆಯಷ್ಟೇ ನಡೆದ ಸಿದ್ದೇಶ್ವರ ಶ್ರೀಗಳ ಅಂತಿಮ ಯಾತ್ರೆಯಲ್ಲಿ ಇಬ್ಬರೂ ಮುಖಂಡರು ಚಿಕ್ಕ ಮಕ್ಕಳಂತೆ ಓಡಾಡಿ ಅಂತಿಮ ಕಾರ್ಯಕ್ಕೆ ಜೊತೆಯಾದರು. ಪೂಜ್ಯರ ಪಾರ್ಥಿವ ಶರಿರಕ್ಕೆ ಹೆಗಲು ಕೊಟ್ಟ ಇಬ್ಬರು ಕಣ್ಣೀರು ಹಾಕಿದ್ದು ಎಂತವರ ಮನ ಕಲಕುವಂತಿತ್ತು. ಅಷ್ಟೇ ಅಲ್ಲ ಯತ್ನಾಳ್ ಹಾಗೂ ಎಂ.ಬಿ ಪಾಟೀಲ್ ಇಬ್ಬರೂ ಸಿದ್ದೇಶ್ವರ ಶ್ರೀಗಳನ್ನು ಅತ್ಯಂತ ಹೆಚ್ಚಾಗಿ ಪೂಜಿಸುತ್ತಿದ್ದರು. ಈ ಎಲ್ಲಾ ಕಾರಣಕ್ಕೆ ಮೂವರ ಮಧ್ಯೆ ಒಂದು ಅದ್ಬುತ ಸಂಬಂಧವಿತ್ತು.