ಬೆಂಕಿ ಬೆಳಕಿನ ಪಥದಲ್ಲಿ ಸಿದ್ದೇಶ್ವರರು
ವಿಜಯಪುರ : ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರಿರಕ್ಕೆ ಅಗ್ನಿಸ್ಪರ್ಶವಾಗಿದ್ದು, ಸರಳ ಸಂತ ಬೆಂಕಿ ಬೆಳಕಿನ ಪಥದಲ್ಲಿ ನಡೆದುಹೋಗಿದ್ದಾರೆ.
ಸೋಮವಾರ ಸಂಜೆ 6 ಗಂಟೆಗೆ ದೇಹತ್ಯಾಗ ಮಾಡಿದ್ದ ಶ್ರೀಗಳ ಪಾರ್ಥಿವ ಶರಿರವನ್ನು ನಗರದ ಸೈನಿಕ ಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಮಂಗಳವಾರ ಸಂಜೆ ಹೊತ್ತಿಗೆ ಬೃಹತ್ ಮೆರವಣಿಗೆ ಮೂಲಕ ಜ್ಞಾನ ಯೋಗಾಶ್ರಮದ ಆಚರಣೆದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗಿತ್ತು.
ಇನ್ನೂ ಶ್ರೀಗಳ ಅಂತಿಮ ದರ್ಶನವನ್ನು ಲಕ್ಷಾಂತರ ಜನ ಪಡೆಯುವ ಮೂಲಕ ಯಾವುದೇ ಗದ್ದಲ ಗಲಾಟೆ ಆಗದಂತೆ ಸಂಯಮ ಕಾಪಾಡಿಕೊಂಡಿದ್ದು ವಿಶೇಷ. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಮಾಜಿ ಸಚಿವ ಎಂ.ಬಿ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.