Breaking – ಭೀಕರ ರಸ್ತೆ ಅಪಘಾತ, 6 ಜನ ಸಾವು
ಬೆಳಗಾವಿ : ಹೊಸ ವರ್ಷದ ಆರಂಭದ ವಾರದಲ್ಲಿಯೇ ಬುಧವಾರ ತಡರಾತ್ರಿ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗುತ್ತಿದ್ದ ವಾಹನದ ರಾಮದುರ್ಗ ತಾಲೂಕಿನ ಚಿಂಚನೂರು ವಿಠ್ಠಲ್ ದೇವಸ್ಥಾನದ ಬಳಿ ಭೀಕರ ಅಪಘಾತದಲ್ಲಿ ಆರು ಜನ ಮೃತಪಟ್ಟ ಘಟನೆ ನಡೆದಿದೆ.
ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೊರಟ್ಟಿದ್ದ ಭಕ್ತರು ಮಹೇಂದ್ರ ಗೂಡ್ಸ್ ವಾಹನದಲ್ಲಿ ಹೊರಟ್ಟಿದ್ದ ಭಕ್ತರು ಆಲದ ಮರಕ್ಕೆ ರಭಸಕ್ಕೆ ಗುದ್ದಿದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಅಪಘಾತದಲ್ಲಿ ಮೃತಪಟ್ಟವರು ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಹನಮವ್ವ ಮ್ಯಾಗಾಡಿ (25), ದೀಪಾ (31), ಸವಿತಾ (17), ಸುಪ್ರೀತಾ ( 11), ಮಾರುತಿ (42), ಇಂದ್ರವ್ವ (24) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಗೋಕಾಕ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.