Select Page

ಬಾವಿ ಸ್ನಾನಕ್ಕೆ ಹೋಗಿದ್ದ ಮಕ್ಕಳು ಸಾವು

ಬಾವಿ ಸ್ನಾನಕ್ಕೆ ಹೋಗಿದ್ದ ಮಕ್ಕಳು ಸಾವು

ಚಿಕ್ಕೋಡಿ : ರಂಗಪಂಚಮಿ ಹಿನ್ನಲೆಯಲ್ಲಿ ಬಣ್ಣದಾಟವಾಡಿ ಬಾವಿ ಸ್ನಾನಕ್ಕೆ ಹೋಗಿದ್ದ ವೇಳೆ ಇಬ್ಬರು ಬಾಲಕರು ನೀರುಪಾಲಾದ ಘಟನೆ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

ವೇದಾಂತ ಹಿರೇಕೋಡಿ (11), ಮನೋಜ ಕಲ್ಯಾಣಿ (09) ಸಾವನ್ನಪ್ಪಿರುವ ದುರ್ದೈವಿಗಳು. ಬುಧವಾರ ಪಟ್ಟಣದಲ್ಲಿ ರಂಗ ಪಂಚಮಿ ನಿಮಿತ್ತ ಬಣ್ಣ ಆಡಿದ್ದ ಮಕ್ಕಳು ಬಾವಿ ನೀರಿನಲ್ಲಿ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.

ಬಾಲಕರ ಸಾವಿಗೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ, ಘಟನಾ ಸ್ಥಳಕ್ಕೆ ಸದಲಗಾ ಠಾಣೆ ಸಿಬ್ಬಂದಿ ಭೇಟಿನೀಡಿ ಪರಿಶೀಲನೆ ‌ನಡೆಸಿದರು.

Advertisement

Leave a reply

Your email address will not be published. Required fields are marked *

error: Content is protected !!