ನೀರು ಸಂಗ್ರಹಿಸಿದ್ದ ಸಂಪ್ ಗೆ ಬಿದ್ದು ಇಬ್ಬರು ಮಕ್ಕಳು ಸಾವು
ಸವದತ್ತಿ : ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನ ಕಟ್ಟಡದ ಸಂಪ್ ನಲ್ಲಿ ಬಿದ್ದು ನರ್ಸರಿ ಓದುತ್ತಿದ್ದ ಇಬ್ಬರು ಮಕ್ಕಳು ಅಸುನೀಗಿದ ಘಟನೆ ನಡೆದಿದೆ.
ನಗರದ ಗುರ್ಲ ಹೊಸೂರ ವಾರ್ಡ್ ನಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನ ಕಟ್ಟದ ನೀರು ಸಂಗ್ರಹಿಸುವ ಸಂಪ್ವಗೆ ಬಿದ್ದು, ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಖಾಸಗಿ ಶಾಲೆಯ ನರ್ಸರಿ ಓದುತ್ತಿರುವ
ಶ್ಲೋಕ ಶಂಭುಲಿಂಗಪ್ಪ ಗುಡಿ (4) ಹಾಗೂ ಚಿದಾನಂದ ಪ್ರಕಾಶ ಸಾಲುಂಕೆ (4) ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಸವದತ್ತಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಮೃತ ದೇಹ ಹೊರತಗೆಯುತ್ತಿದ್ದಾರೆ.