ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ : ದಂಗಾದ ಗ್ರಾಮಸ್ಥರು
ಕಾಗವಾಡ : ಅಪರಿಚಿತ ವ್ಯಕ್ತಿಯೋರ್ವನ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಪಾಂಡೆಗಾಂವ್ ಹೊರವಲಯದಲ್ಲಿ ನಡೆದಿದೆ.
ಕೆಂಪು ಟಿ ಶರ್ಟ್ ಹಾಗೂ ಪ್ಯಾಂಟ್ ತೊಟ್ಟಿದ್ದ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಮೃತ ದೇಹಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾರೆ ಎನ್ನಲಾಗಿದೆ. ಸುಮಾರು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು ಬೇಸಿಗೆ ಹಿನ್ನೆಲೆ ಬಾವಿ ನೀರು ಖಾಲಿಯಾದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರತಗೆದಿದ್ದು ತನಿಖೆ ಮುಂದುವರಿದಿದೆ.