
ತಾಂವಶಿ ಗ್ರಾಮದಲ್ಲಿ ಶಿವಯೋಗಿಗಳ ನೂತನ ತಪೋವನ ಲೋಕಾರ್ಪಣೆ ; ಕಾರ್ಯಕ್ರಮದ ವಿವರ

ಅಥಣಿ : ತಾಲೂಕಿನ ತಾಂವಶಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಥಣಿ ಮುರುಘೇಂದ್ರ ಶಿವಯೋಗಿಗಳ ಮಠದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ನದಿ ಇಂಗಳಗಾಂವ ಸಿದ್ದಲಿಂಗ ಮಹಾಸ್ವಾಮಿಜಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಆರು ದಿನಗಳವರೆಗೆ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು
ಏ. 07 ರ ಸಂಜೆ ನಾಲ್ಕು ಗಂಟೆಗೆ ದತ್ತಾತ್ರೇಯ ದೇವಸ್ಥಾನದಿಂದ ಪೂಜ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಮೂರ್ತಿ ಹಾಗೂ ಕಳಸದ ಭವ್ಯ ಮೆರವಣಿಗೆ ತಪೋವಣಕ್ಕೆ ಆಗಮಿಸಲಿದೆ. ನಂತರ ಪ್ರತಿದಿನ ಬಸವಾದಿ ಶರಣರು ಹಾಗೂ ಶಿವಯೋಗಿಗಳ ಜೀವನ ದರ್ಶನ ಕಾರ್ಯಕ್ರಮ ಜರುಗಲಿವೆ.
ಏ. 12 ರಂದು ಮುರುಘೇಂದ್ರ ಶಿವಯೋಗಿಗಳ ಮಠದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನೆರವೇರಲಿದೆ. ಈ ಕಾರ್ಯಕ್ರಮ ನದಿ ಇಂಗಳಗಾಂವಿಯ ಗುರುಲಿಂಗದೇವರ ಮಠದ ಸಿದ್ದಲಿಂಗ ಶ್ರೀಗಳ ಸಮ್ಮುಖದಲ್ಲಿ ನೆರವೇರಲಿದ್ದು ಕಾರ್ಯಕ್ರಮಕ್ಕೆ ವಿವಿಧ ಮಠದ ಸ್ವಾಮೀಜಿಗಳು ಆಗಮಿಸಲಿದ್ದಾರೆ.