
ನಾಳೆ ಬೆಳಗಾವಿಯಲ್ಲಿ ಪ್ರಧಾನಿ ವಾಸ್ತವ್ಯ : ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ

ಬೆಳಗಾವಿ : ನಾಳೆ ಶನಿವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಬರಲಿದ್ದು ರಸ್ತೆ ಸಂಚಾರದಲ್ಲಿ ಮಹತ್ವದ ಬದಲಾವಣೆ ಮಾಡಲಿಗೆ. ಈ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಬೆಳಗಾವಿ ಪ್ರಮುಖ ರಸ್ತೆ ಮಾರ್ಗದಲ್ಲಿ ಬದಲಾವಣೆ –
ಏಪ್ರಿಲ್ 27 & 28 ರಂದು ಪ್ರಧಾನಿ ಮೋದಿ ಸಂಚರಿಸಲಿರುವ
ಹೊನಗಾ ದಿಂದ ಸುವರ್ಣ ವಿಧಾನಸೌಧ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಸರ್ವಿಸ್ ರಸ್ತೆಗಳು ಹಾಗೂ ಬಾಗಲಕೋಟೆ ರಸ್ತೆಗಳ ಮಾರ್ಗಗಳಲ್ಲಿ ಸಾರ್ವಜನಿಕ ಸಂಚಾರದಲ್ಲಿ ತೊಡಕುಂಟಾಗುವ ಹಿನ್ನೆಲೆಯಲ್ಲಿ ಬದಲಿ ಮಾರ್ಗಗಳನ್ನು ಬಳಸಿಕೊಳ್ಳಬೇಕಾಗಿದೆ.
ಕೊಲ್ಹಾಪೂರ, ನಿಪ್ಪಾಣಿ ಕಡೆಗಳಿಂದ ಬೆಳಗಾವಿ ನಗರ ಕಡೆಗೆ ಬರುವ ಎಲ್ಲ ವಾಹನಗಳು ಸಂಕೇಶ್ವರ ದಿಂದ ಹುಕ್ಕೇರಿ ಮಾರ್ಗ ಬಳಸಿಕೊಳ್ಳಬೇಕು.
ಎಮ್. ಕೆ. ಹುಬ್ಬಳ್ಳಿ, ಧಾರವಾಡ ಕಡೆಗಳಿಂದ ಬೆಳಗಾವಿ ನಗರ ಮೂಲಕ ಸಂಚರಿಸುವ ವಾಹನಗಳು ನೇಗಿನಹಾಳ, ನೇಸರಗಿ, ಬೆಂಡಿಗೇರಿ ಕ್ರಾಸ್ ಮಾರ್ಗಗಳನ್ನು ಬಳಸಿಕೊಳ್ಳುವುದು.
ನಿಪ್ಪಾಣಿ, ಕೊಲ್ಹಾಪೂರ, ಯಮಕನಮರ್ಡಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು
ರಾಮ ಡಾಭಾ ಹತ್ತಿರ ಬಲತಿರುವು ಪಡೆದುಕೊಂಡು ಮುಂದೆ ಸಂಚರಿಸಬೇಕು.
ಬಾಗಲಕೋಟ ಕಡೆಯಿಂದ ಬೆಳಗಾವಿ ನಗರ ಕಡೆಗೆ ಸಂಚರಿಸುವ ವಾಹನಗಳು ನೇಸರಗಿ ಗೋಕಾಕ
ಮಾರ್ಗವಾಗಿ ಸಂಚರಿಸಬೇಕು.
ಬಾಗಲಕೋಟ, ರಾಯಚೂರು, ಯರಗಟ್ಟಿ ಮಾರ್ಗಗಳಲ್ಲಿ ಸಂಚರಿಸುವ ವಾ.ಕ.ರ.ಸಾ.ಸಂಸ್ಥೆಯ
ಬಸ್‌ಗಳು ಕನಕದಾಸ ಸರ್ಕಲ್, ಕಣಬರಗಿ, ಖನಗಾಂವ ಸುಳೇಬಾವಿ, ಮಾರಿಹಾಳ ಪೊಲೀಸ್ ಠಾಣಾ
ಕ್ರಾಸ್ ಮೂಲಕ ಬಾಗಲಕೋಟ ರಸ್ತೆಗೆ ಸಂಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಎಡಾ ಮಾರ್ಟಿನ್ ತಿಳಿಸಿದ್ದಾರೆ.
ಬೆಳಗಾವಿ ನಗರದಿಂದ ಯಡಿಯೂರಪ್ಪ ರಸ್ತೆ ಮೂಲಕ ಅಲಾರವಾಡ ಬ್ರಿಡ್ಜ್ ಕಡೆಗೆ ಸಂಚರಿಸುವ
ವಾಹನಗಳು ಬದಲಿ ಮಾರ್ಗ ಬಳಸಿಕೊಳ್ಳುವುದು.
ದಿನಾಂಕ: 7 ರಂದು ಸಾಯಂಕಾಲ ಹಾಗೂ 28 ರ
ಮದ್ಯಾಹ್ನದವರೆಗೆ ಎಲ್ಲ ಭಾರಿ ಹಾಗೂ ಮಧ್ಯಮ ಗಾತ್ರದ ವಾಹನಗಳು ಬೆಳಗಾವಿ ನಗರದಲ್ಲಿ ಸಂಚರಿಸುವ ಬದಲಾಗಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬೇಕು.
ಕಾರ್ಯಕ್ರಮಕ್ಕೆ ಬರುವ ವಾಹನಗಳ ನಿಲುಗಡೆ ಸ್ಥಳಗಳು:
ಪಾರ್ಕಿಂಗ್- 1 (ಜ್ಯೋತಿ ನಗರ, ಯಡಿಯೂರಪ್ಪ ಮಾರ್ಗದ ಬಳ್ಳಾರಿ ನಾಲಾ ಹತ್ತಿರ): ಬೆಳಗಾವಿ ನಗರದಿಂದ ಬರುವ ವಾಹನಗಳು
ಪಾರ್ಕಿಂಗ್-02 (ಹಲಗಾ-ಮಚ್ಛೆ ಬೈಪಾಸ್ ರಸ್ತೆ): ನಿಪ್ಪಾಣಿ, ಅಥಣಿ, ಚಿಕ್ಕೋಡಿ, ರಾಯಬಾಗ, ಕುಡಚಿ, ಸಂಕೇಶ್ವರ, ಹುಕ್ಕೇರಿ ಭಾಗಗಳಿಂದ ಬರುವ ವಾಹನಗಳು.
ಪಾರ್ಕಿಂಗ್-03 (ಅಲಾರವಾಡ ಸರ್ವಿಸ್ ರಸ್ತೆಯ ಪಶ್ಚಿಮ ಬದಿ): ಬೈಲಹೊಂಗಲ, ಬಾಗೇವಾಡಿ, ರಾಮದುರ್ಗ, ಸೌಂದತ್ತಿ ಭಾಗಗಳಿಂದ ಬರುವ ವಾಹನಗಳು.
ಪಾರ್ಕಿಂಗ್-04 (ಅಲಾರವಾಡ ಸರ್ವಿಸ್ ರಸ್ತೆಯ ಪೂರ್ವ ಬದಿ): ಗೋಕಾಕ, ಅರಭಾಂವಿ, ಘಟಪ್ರಭಾ ಭಾಗಗಳಿಂದ ಬರುವ ವಾಹನಗಳು ಈ ಮೇಲ್ಕಂಡ ಸ್ಥಳಗಳಲ್ಲಿಯೇ ವಾಹನ ನಿಲುಗಡೆ ಮಾಡಲು ಹಾಗೂ ಸಂಚಾರ ಮಾರ್ಗ
ಬದಲಾವಣೆಗೆ ಸಾರ್ವಜನಿಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.