ಯುವಾ ಬ್ರಿಗೇಡ್ ವತಿಯಿಂದ ವಿದ್ಯಾರ್ಥಿಗಳಿಗೆ ರೋಗ ನಿರೋಧಕ ಆಯುರ್ವೇದ ಔಷಧಿ ವಿತರಣೆ
ಅಥಣಿ : ಕೊರೊನಾ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಯುವ ಬ್ರಿಗೇಡ್ ತಂಡ ತಾಲೂಕಿನ ಶೇಗುಣಸಿ ಗ್ರಾಮದ ಶಾಲಾ ಮಕ್ಕಳಿಗೆ ಶಕ್ತಿವರ್ಧಕ ಆಯುರ್ವೇದ ಔಷಧಿ ವಿತರಣೆ ಮಾಡಿದರು.
ಯುವಾ ಬ್ರಿಗೇಡ್ ಸಂಘಟನೆ ಮಹತ್ವಾಕಾಂಕ್ಷಿ ಯೋಜನೆಯಾದ ಚಿರಂಜೀವಿ ಕಾರ್ಯಕ್ರಮದ ಮೂಲಕ ಕೊರೊನಾ ಮೂರನೇ ಅಲೆಯಿಂದ ಶಾಲಾ ಮಕ್ಕಳನ್ನು ರಕ್ಷಿಸಲು ಉಚಿತವಾಗಿ ಶಕ್ತಿವರ್ಧಕ ಆಯುರ್ವೇದ ಔಷದಿ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ದಿ. ಶ್ರೀ ಬಿ.ಆರ್.ಅವಕ್ಕನವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಚಿರಂಜೀವಿ ಔಷದ ಕಿಟ್ ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಪ್ರಮುಖರಾದ ವರ್ಧಮಾನ ತ್ಯಾಗಿ ಮಾತನಾಡಿ. ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಜನರು ತುಂಬಾ ಸಂಕಷ್ಟ ಎದುರಿಸಿದ್ದನ್ನು ನಾವು ನೋಡಿದ್ದೇವೆ. ಆದರೆ ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಯುವಾ ಬ್ರಿಗೇಡ್ ಸಂಘಟನೆ ವತಿಯಿಂದ ಮಕ್ಕಳಿಗೆ ರೋಗ ನಿರೋಧಕ ಹಾಗೂ ಶಕ್ತಿವರ್ಧಕ ಔಷಧಿ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಾರಗೊಂಡ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ವಿವೇಕ ನಾರಗೊಂಡ, ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಆಲೂರ. ಆನಂದ ಅವಕ್ಕನವರ, ಗಜಾನನ ಮೋಪಗಾರ, ಬಾಬು ಕಾಗಲೆ , ಎಸ್.ಡಿ.ಎಮ್.ಸಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಹಾಜರಿದ್ದರು.