ಸಿಲಿಂಡರ್ ಸ್ಟೋಟ ವಿದ್ಯಾರ್ಥಿ ಸಾವು
ಮೂಡಲಗಿ : ತಾಲೂಕಿನ ನಾಗನೂರ ಗ್ರಾಮದಲ್ಲಿ ಶುಕ್ರವಾರ ಸಂಜೆ ಚಹಾ ಮಾಡಿಕೊಳ್ಳಲು ಅಡುಗೆ ಮನೆಗೆ ತೆರಳಿದ್ದ ಶ್ರೀಧರ ಶಿವಪ್ಪ ಪ್ಯಾಟಿ(19) ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಸ್ಥಳದಲ್ಲಿ ಇದ್ದ ಸಾರ್ವಜನಿಕರು ಬೆಂಕಿ ನಿಂದಿಸಿ, ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜರುಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದವರಾದ ಮೃತನ ತಂದೆ ನಾಗನೂರ ಗ್ರಾಮದ ಸಮೀಪದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ ನಾಗನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಶ್ರೀಧರ ಕುಟಂಬಸ್ಥರು ದೀಪವಾಳಿಗೆಂದು ಮನೆಯ ಸದಸ್ಯರೆಲ್ಲರೂ ಸ್ವಗ್ರಾಮ ಸುರೇಬಾನಕ್ಕೆ ಹೋಗಿದ್ದರು. ಮೂಡಲಗಿ ಪಟ್ಟಣದಲ್ಲಿ ನರ್ಸಿಂಗ್ ವ್ಯಾಸಾಂಗ ಮಾಡುತ್ತಿರುವುದರಿಂದ ಗುರುವಾರ ಸುರೇಬಾನದಿಂದ ನಾಗನೂರಿನ ಮನೆಗೆ ಆಗಮಿಸಿದಾ ಎನ್ನಲಾಗುತ್ತಿದೆ.
ಸ್ಥಳಕ್ಕೆ ಧಾವಿಸಿದ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ, ಸಿಪಿಐ ಶ್ರೀಶೈಲ್ ಬ್ಯಾಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಮೂಡಲಗಿ ಪೊಲೀಸ್ ಸಿಬ್ಬಂದಿಗಳು ಇದ್ದರು.