
ಗೋಕಾಕ್ – ಸೈನಿಕನ ಪತ್ನಿ ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ – VIDEO ದಲ್ಲಿ ನೋವು ತೋಡಿಕೊಂಡ ಮಹಿಳೆ

ಬೆಳಗಾವಿ : ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಯೋಧನ ಪತ್ನಿ ಮತ್ತು ಚಿಕ್ಕಮ್ಮಗೆ ಕಣ್ಣಿಗೆ ಕಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳುಗಳು ಗೋಕಾಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂದಿನ ವರ್ಷ ಅಶೋಕ ಮೂಲಿಮನಿ ಸ್ವಯಂ ನಿವೃತ್ತಿ ಹೊಂದಲಿದ್ದಾರೆ. ಈ ಸಂಬಂಧ ಗ್ರಾಮಕ್ಕೆ ನಾಲ್ಕು ದಿನಗಳ ಹಿಂದೆ ಸಂಗೀತಾ ಮತ್ತು ಮಲ್ಲವ್ವ ಮರಳಿದ್ದಾರೆ. ಬಾಡಿಗೆಗೆ ವಾಸವಿದ್ದವರಿಗೆ ಮನೆ ಬಿಡುವಂತೆ ಹೇಳಿದ್ದಾರೆ.
ಇದಕ್ಕೆ ಸಂತೋಷ ಮಾಳಿ, ಈರಯ್ಯ ಮಠದ, ರೂಪಾ, ಸತ್ಯವ್ವಾ, ಭಾರತಿ ಮಾಳಿ ಎಂಬುವರು ಯೋಧನ ಪತ್ನಿ ಮತ್ತು ಚಿಕ್ಕಮ್ಮರಿಗೆ ಕಣ್ಣಿಗೆ ಕಾರದ ಪುಡಿ ಎರಚಿ, ಮನೆಯಲ್ಲಿಟ್ಟಿದ್ದ ಸಾಮಾಗ್ರಿಗಳನ್ನ ರಸ್ತೆಗೆ ಎಸೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.