ಮೃತ ಪಿಎಸ್ಐ ಪರಶುರಾಮ್ ಮನೆಯಲ್ಲಿ ಕಾಂಗ್ರೆಸ್ ಶಾಸಕನ ಲೆಟರ್ ಹೆಡ್ ಪತ್ತೆ
ಬೆಳಗಾವಿ : ಯಾದಗಿರಿ ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು ಮೃತ ಪಿಎಸ್ಐ ಮನೆಯಲ್ಲಿ ಕಾಂಗ್ರೆಸ್ ಶಾಸಕನ ಲೆಟರ್ ಹೆಡ್ ಪತ್ತೆಯಾಗಿದೆ.
ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳಿಗೆ ಲೆಟರ್ ಹೆಡ್ ಪತ್ತೆಯಾಗಿದೆ. ಕಾನೂನು ಸುವ್ಯವಸ್ಥೆ ವಿಭಾಗ ಬೇರೆ ಅಧಿಕಾರಿಗೆ ಹಂಚಿಕೆಯಾದ ಹಿನ್ನೆಲೆ ಅಪರಾಧ ವಿಭಾಗಕ್ಕೆ ಪೋಸ್ಟಿಂಗ್ ಕೇಳಿದ್ದಾರೆ. ಯಾದರಿಗೆ ಪೊಲೀಸ್ ಠಾಣೆ ಅಪರಾಧ ವಿಭಾಗಕ್ಕೆ ಪೋಸ್ಟಿಂಗ್ ಗಾಗಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಲೆಟರ್ ಹೆಡ್ ನೀಡಿದ್ದಾರೆ.
ಯಾದಗಿರಿ ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದ ಪೋಸ್ಟಿಂಗ್ ಗಾಗಿ ಶಾಸಕ ಪಿಎಸ್ಐ ಬಳಿ ಹದಿನೈದು ಲಕ್ಷ ರೂ ಕೇಳಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಹಣ ಹೊಂದಿಸುತ್ತಿದ್ದ ಪಿಎಸ್ಐ ಮನೆಯಲ್ಲಿ 7.5 ಲಕ್ಷ ರೂ. ಪತ್ತೆಯಾಗಿದದೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ ಪಿಎಸ್ಐ ಮನೆಯಲ್ಲಿ ಇಲಾಖೆಯ ಪಿಸ್ತೂಲ್, ಮೋಬೈಲ್, ಸಿಮ್ ಕಾರ್ಡ್ ಹಾಗೂ ವಾಕಿಟಾಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಿಎಸ್ಐ ಬಾಯಿಯಿಂದ ಬಿದ್ದ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ.