ಅಥಣಿ : ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ
ಅಥಣಿ : ಪಟ್ಟಣದ ಹೊರವಲಯದ ಚೌವ್ಹಾಣ್ ತೋಟದ ಮನೆ ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆಯಾಗಿದೆ.
ಅಥಣಿ ಪಟ್ಟಣದ ಮದಭಾವಿ ರಸ್ತೆ ಹೊಂದಿಕೊಂಡಿರುವ ಚೌಹಾಣ್ ತೋಟ ನಾನಾ ಸಾಹೇಬ್ ಬಾಬು ಚೌವ್ಹಾಣ್ (58) ಜಯಶ್ರೀ ನಾನಾ ಸಾಹೇಬ್ ಚೌವ್ಹಾಣ್ (50) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸುಮಾರು ಐದು ಆರು ದಿನದ ಹಿಂದೆ ನೇಣು ಬಿಗಿದುಕೊಂಡು ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಮನೆಯ ಸುತ್ತಲೂ ದುರ್ವಾಸನೆ ಬರುತ್ತಿದ್ದಂತೆ ಪಕ್ಕದ ಮನೆಯವರು ಗಮನಿಸಿ ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಆರಕ್ಷಕರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸ್ಥಳಿಯರ ಮಾಹಿತಿ ಪ್ರಕಾರ ದಂಪತಿಗಳಿಗೆ ಒಬ್ಬನೆ ಮಗ ಇರುವುದರಿಂದ ಜಮಖಂಡಿ , ಸಂಕೇಶ್ವರ, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ ತಿಂಗಳಿನ 29 ನೇ ತಾರೀಕು ಜಮಖಂಡಿ
ಪೊಲೀಸರು ಆರೋಪಿಯಾದ ದಿಲೀಪ್ ನಾನಾಸಾಹೇಬ್ ಚೌವ್ಹಾಣ್ ಅವರನ್ನು ಮನೆಯಲ್ಲಿ ಬಂಧನ ಮಾಡಿ ಕರೆದುಕೊಂಡು ಹೋಗಿದ್ದರಿಂದ ದಂಪತಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಸಿದ್ದಾರೆ.
ದಂಪತಿಗಳ ಸಾವು ಹಲವು ಅನುಮಾನಗಳು ಹುಟ್ಟಿಸಿದ್ದು ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ ಅಥಣಿ ಸಿಪಿಐ ಸಂತೋಷ ಹಳ್ಳೂರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಶವ ಇರುವುದರಿಂದ ಸ್ಥಳಕ್ಕೆ ಆರೋಗ್ಯ ಅಧಿಕಾರಿ ಬಸನಗೌಡ ಕಾಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.