ಹೊಸ ವರ್ಷದ ಮೊದಲ ದಿನವೇ ಭೀಕರ ರಸ್ತೆ ಅಪಘಾತ ; ಮೂರು ಸಾವು
ಬೆಂಗಳೂರು : ಹೊಸ ವರ್ಷದ ಮೊದಲ ದಿನವೇ ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು ಮೂವರು ಮೃತಪಟ್ಟ ಘಟನೆ ವರದಿಯಾಗಿದೆ.
ಟೀ ಕುಡಿಯಲು ತೆರಳಿದ್ದ ಯುವಕರಿದ್ದ ಜಾರು ಪಲ್ಟಿ ಆದ ಪರಿಣಾಮ ಇಬ್ಬರು ಸಾವಣಪ್ಪಿದ್ದು ಐವರು ಗಂಭೀರವಾಗಿ ಗಾಯಗೊಂಡ ಘಟನೆ ಮಾಗಡಿ ತಾಲೂಕಿನ ಹೊಸಪಾಳ್ಯ ಜನತಾ ಕಾಲೊನಿ ಬಳಿ ನಡೆದಿದೆ.
ಮಂಜು (31) ಕಿರಣ್ ( 30 ) ಮೃತ ದುರ್ದೈವಿಗಳು. ಮೂಲತಃ ಮಾಗಡಿ ತಾಲೂಕಿನ ಚೋಳನಾಯಕನಹಳ್ಳಿ ಗ್ರಾಮದವರು. ಬೆಳಿಗ್ಗೆ ಮೂರು ಘಂಟೆಗೆ ಅವಘಡ ಸಂಭವಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಗಡಿ ತಾಲೂಕಿನ ಹೊಸಪೇಟೆ ಸರ್ಕಲ್ ಬಳಿ ಸಂಭವಿಸಿದ ಅಪಘಾತ ಸಿದ್ದಪ್ಪ ಸಾವಣಪ್ಪಿದ್ದಾನೆ. ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಗುದ್ದಿದ ಪರಿಣಾಮ ಘಟನೆ ಸಂಭವಿಸಿದೆ.