
ಲಾಯರ್ ಜಗದೀಶ್ ಮೇಲೆ ಹಲ್ಲೆ ; ಮೂಗಲ್ಲಿ ಸುರಿದ ರಕ್ತ

ಬೆಂಗಳೂರು : ಕನ್ನಡ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಹಲ್ಲೆ ನಡೆದಿದ್ದು ಮೂಗಲ್ಲಿ, ಬಾಯಲ್ಲಿ ರಕ್ತ ಸುರಿಸಿದೆ.
ಬೆಂಗಳೂರಿನಲ್ಲಿ ಈ ಘಟನೆ ಸಂಭವಿಸಿದ್ದು ಲಾಯರ್ ಜಗದೀಶ್ ಮೇಲೆ 40 ಕ್ಕೂ ಅಧಿಕ ಜನ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಲಾಯರ್ ಜಗದೀಶ್ ತಮ್ಮ ಏರಿಯಾದಲ್ಲಿ ಕೆಲ ಯುವಕರ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಆಗಲು ಕೆಲವರು ಹಲ್ಲೆ ನಡೆಸಿದ್ದರು.
ಸಧ್ಯ ಇವರ ಮೇಲೆ ಗಂಭೀರ ಹಲ್ಲೆ ಆಗಿದ್ದು ಪೊಲೀಸರು ರಕ್ಷಣೆ ಮಾಡಿದ್ದಾರೆ. ಮೂಗಲ್ಲಿ ರಕ್ತ ಸುರಿದರು ಲಾಯರ್ ಜಗದೀಶ್ ಫೆಸ್ಬುಕ್ ಲೈವ್ ಬಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಎಲ್ಲಿ ಕಾನೂನು ಸುವ್ಯವಸ್ಥೆ ಇದೆ. ಮುಖ್ಯಮಂತ್ರಿ ಏನು ಮಾಡುತ್ತಿದ್ದಾರೆ. ನನ್ನ ಮೇಲೆ ಗಂಭೀರ ಹಲ್ಲೆ ಆಗಿದೆ ಎಂದು ಲೈವ್ ನಲ್ಲೆ ಅಳಲು ತೋಡಿಕೊಂಡಿದ್ದಾರೆ.