Select Page

ಅಥಣಿ : ಕೃಷ್ಣಾ ನದಿ ತಟದಲ್ಲಿ ಮೊಸಳೆ ಕಾಟ ; ಸೆರೆಹಿಡಿದ ಸಪ್ತಸಾಗರ ಗ್ರಾಮಸ್ಥರು – VIDEO

ಅಥಣಿ : ಕೃಷ್ಣಾ ನದಿ ತಟದಲ್ಲಿ ಮೊಸಳೆ ಕಾಟ ; ಸೆರೆಹಿಡಿದ ಸಪ್ತಸಾಗರ ಗ್ರಾಮಸ್ಥರು – VIDEO



ಬೆಳಗಾವಿ : ನೀರಿಲ್ಲದೆ ಬತ್ತಿದ ಕೃಷ್ಣಾ ನದಿ ತೀರದ ಗ್ರಾಮದ ಜನರಿಗೆ ಸಧ್ಯ ಮೊಸಳೆ ಕಂಟಕ ಎದುರಾಗಿದೆ. ನದಿ ದಡದ ಗದ್ದೆಗೆ ನುಗ್ಗಿದ ಮೊಸಳೆಯನ್ನು ಸೆರೆಹಿಡಿದ ಗ್ರಾಮಸ್ಥರು ಹಗ್ಗದಿಂದ ಗಿಡಕ್ಕೆ ಕಟ್ಟಿ ಹಾಕಿರುವ ಘಟನೆ ಅಥಣಿ ತಾಲುಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ.

ಸಧ್ಯ ‌ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು ಜಲಚರಗಳು ಸಾವಣಪ್ಪುತ್ತಿವೆ, ಈ ಮಧ್ಯೆ ಬಿಸಿಲಿನ ಹೊಡೆತಕ್ಕೆ ಮೊಸಳೆಗಳು ನದಿ ಬಿಟ್ಟು ಪಕ್ಕದ ಗದ್ದೆಗಳಿಗೆ ನುಗ್ಗುತ್ತಿವೆ. ದಡದಲ್ಲಿ ಮೊಸಳೆಗಳು ಪ್ರತ್ಯಕ್ಷವಾಗುತ್ತಿದ್ದು ಎಲ್ಲೆಡೆ ಆತಂಕ ಮನೆ ಮಾಡಿದೆ.

ಗ್ರಾಮಸ್ಥರು ಸೆರೆ ಹಿಡಿದ ಮೊಸಳೆ ಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದು ಸ್ಥಳಾಂತರ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!