ಶಾವಿಗೆ ಒಣಗಿಸಲು ಬೆಳಕೆಯಾಗುತ್ತಿದೆ ಸುವರ್ಣ ಸೌಧದ ಆವರಣ
ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಸಮಸ್ಯೆ ಆಲಿಸಲು ನಿರ್ಮಾಣವಾದ ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಶಾವಿಗೆ ಒಣಗಿಸುವ ಪೋಟೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾವುದಕ್ಕೆ ಬಳಕೆಯಾಗಬೇಕಿದ್ದ ಸೌಧದ ಮೂಲ ಉದ್ದೇಶವೇ ಸಧ್ಯ ನಗೆಪಾಟಲಿಗೆ ಈಡಾಗಿರುವುದು ವಿಪರ್ಯಾಸ.
ಹೌದು ರಾಷ್ಟ್ರೀಯ ಹೆದ್ದಾರಿ ಪಕ್ಕದದಲ್ಲಿರುವ ಬೆಳಗಾವಿ ಸುವರ್ಣವಿಧಾನಸೌದದಲ್ಲಿ ಪ್ರತಿವರ್ಷ ಚಳಿಗಾಲದ ಅಧಿವೇಶನ ಬಿಟ್ಟರೆ ಮತ್ಯಾವ ಮಹತ್ವದ ಕಾರ್ಯಕ್ರಮ ನಡೆಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕೋಟ್ಯಾಂತರ ರೂ ಹಣ ಕರ್ಚು ಮಾಡಿ ನಿರ್ಮಿಸಿರುವ ಸುವರ್ಣಸೌಧದ ಮುಂಬಾಗ ಶಾವಿಗೆ ಒಣ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ಮಾಡಿದ್ದ ಯಡವಟ್ಟು : ಸುವರ್ಣಸೌಧದಲ್ಲಿ ಕೆಲಸಕ್ಕೆ ಬರುವ ಮಹಿಳೆಗೆ ಬೇರೊಬ್ಬರು ಶಾವಿಗೆ ತಗೆದುಕೊಂಡು ಹೋಗಲು ಹೇಳಿದ್ದಾರೆ. ಇದನ್ನು ತಲುಪಿಸಲು ತಂದ ಮಹಿಳೆ ಕೆಲಹೊತ್ತು ಸುವರ್ಣಸೌಧದ ಆವರಣದಲ್ಲಿ ಒಣ ಹಾಕಿದ್ದಾರೆ. ಈ ಸಂದರ್ಭದಲ್ಲಿ ಯಾರೋ ಒಬ್ಬರು ಪೋಟೋ ತಗೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು. ಶಾವಿಗೆ ಒಣ ಹಾಕಿದ ಮಹಿಳೆಯನ್ನು ಕೆಲಸದಿಂದ ತಗೆಯಲಾಗಿದೆ.
ಒಟ್ಟಿನಲ್ಲಿ ಮಹಿಳೆ ಮಾಡಿದ ಅವಾಂತರದಿಂದ ಸಧ್ಯ ಬೆಳಗಾವಿ ಸುವರ್ಣಸೌಧದ ಘನತೆ ಮೂರಾಬಿಟ್ಟಿಯಾಗಿದ್ದು ವಿಪರ್ಯಾಸ.