ಟಿಕೆಟ್ ಆಸೆಯಿಂದ ವಚನ ತಪ್ಪಿದರಾ ಲಕ್ಷ್ಮಣ ಸವದಿ ; ಹಿಂದೆ ಏನಾಗಿತ್ತು ಅಥಣಿ ಟಿಕೆಟ್ ಮಾತುಕತೆ
ಬೆಳಗಾವಿ : 2023 ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಕುತೂಹಲ ಮೂಡಿಸಿದ ಕ್ಷೇತ್ರದಲ್ಲಿ ಅಥಣಿ ವಿಧಾನಸಭಾ ಕ್ಷೇತ್ರ ಕೂಡಾ ಒಂದು. ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ನಡುವೆ ಟಿಕೆಟ್ ಪೈಪೋಟಿ ಜೋರಾಗಿ ನಡೆದಿದೆ. ಆದರೆ ಈ ಹಿಂದೆ ಶಾಸಕ ಮಹೇಶ್ ಕುಮಠಳ್ಳಿ ಬಿಜೆಪಿ ಸೇರ್ಪಡೆಯಾಗುವ ಸಂದರ್ಭದಲ್ಲಿ ಏನೆಲ್ಲ ಮಾತುಕತೆ ಆಗಿತ್ತು ಎಂಬುದರ ಕುರಿತು ಸಧ್ಯ ಚರ್ಚೆ ನಡೆಯುತ್ತಿದೆ.
ಆಪರೇಷನ್ ಕಮಲದ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಹೇಶ್ ಕುಮಠಳ್ಳಿ ನಂತರ ಉಪ ಚುನಾವಣೆಯಲ್ಲಿ ಅಥಣಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು. ಎರಡನೇ ಬಾರಿಗೆ ಶಾಸಕರಾದರು. ಈ ಸಂದರ್ಭದಲ್ಲಿ ಸ್ಥಳೀಯ ಮಾಜಿ ಶಾಸಕ ಲಕ್ಷ್ಮಣ ಸವದಿ ಸೋತರು ಡಿಸಿಎಂ ಹುದ್ದೆ ಅಲಂಕರಿಸಿದ್ದರು. ಈ ಸಂದರ್ಭದಲ್ಲಿ ಕುಮಠಳ್ಳಿಗೆ ಟಿಕೆಟ್ ಬಿಟ್ಟುಕೊಟ್ಟರು.
ಏನಾಗಿತ್ತು ಮಾತುಕತೆ : ಸಧ್ಯ ಅಥಣಿ ಟಿಕೆಟ್ ಬೇಕು ಎನ್ನುತ್ತಿರುವ ಲಕ್ಷ್ಮಣ ಸವದಿ ಈ ಹಿಂದೆ ನಡೆದ ಮಾತನ್ನು ಗಾಳಿಗೆ ತೂರುತ್ತಿದ್ದಾರೆ ಎಂಬುದು ಹಲವರ ವಾದವಾಗಿದೆ. ಹಾಗಾದರೆ ಕುಮಠಳ್ಳಿ ಬಿಜೆಪಿ ಸೇರುವಾಗ ಏನಾಗಿತ್ತು ಮಾತುಕತೆ. ನನಗೆ ಯಾವ ಮಂತ್ರಿ ಪದವಿ ಬೇಡ. ರಮೇಶ್ ಜಾರಕಿಹೊಳಿಗೆ ನೀರಾವರಿ ಸಚಿವಸ್ಥಾನ ಕೊಡಿ.
2023 ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿದರೆ ಸಾಕು ಎಂಬ ಮಾತುಕತೆ ನಡೆದಿತ್ತು ಎಂದು ಹೇಳಲಾಗುತ್ತಿದೆ.
ಈ ಕುರಿತು ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ. ಈ ಹಿಂದೆ ಅಥಣಿ ಟಿಕೆಟ್ ಕುರಿತು ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ. ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ನೀಡುವುದು ಸ್ಪಷ್ಟವಾಗಿದೆ. ಆದರೆ ಸವದಿ ಯಾಕೆ ಈಗ ಗೊಂದಲ ಮೂಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂಬ ಮಾತನ್ನು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಟಿಕೆಟ್ ಆಸೆಗೆ ವಚನ ತಪ್ಪುತ್ತಿದ್ದಾರಾ ಲಕ್ಷ್ಮಣ ಸವದಿ : ಈಗಾಗಲೇ ಅಥಣಿಯಿಂದ ಸೋತರೂ ಲಕ್ಷ್ಮಣ ಸವದಿ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಅಲಂಕರಿಸಿದರು. ಇದೆಲ್ಲ ಸಾಧ್ಯವಾಗಿದ್ದು ಮಹೇಶ್ ಕುಮಠಳ್ಳಿ ಅವರಂತವರ ತ್ಯಾಗ ಎಂದು ಸ್ವತಃ ಯಡಿಯೂರಪ್ಪ ಕೂಡಾ ಹೇಳಿದ್ದಾರೆ. ಆದರೆ ಈ ಬಾರಿ ಅಥಣಿ ಟಿಕೆಟ್ ತಪ್ಪಿದರೆ ಮುಂದೊಮ್ಮೆ ತಾಲೂಕಿನಿಂದ ಸೈಡ್ ಲೈನ್ ಆಗಬಹುದು ಎಂಬ ಲೆಕ್ಕಾಚಾರದಿಂದ ಸವದಿ ಹೈಕಮಾಂಡ್ ಮಟ್ಟದಲ್ಲಿ ನೀಡಿದ್ದ ವಚನ ತಪ್ಪುತ್ತಿದ್ದಾರಾ ಎಂಬ ಮಾತು ಎಲ್ಲೆಡೆ