Select Page

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಬಸವೇಶ್ವರ ಬೃಹತ್ ಮೂರ್ತಿ – ಸಿಎಂ ಬೊಮ್ಮಾಯಿ

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಬಸವೇಶ್ವರ ಬೃಹತ್ ಮೂರ್ತಿ – ಸಿಎಂ ಬೊಮ್ಮಾಯಿ

ಬೆಳಗಾವಿ : ಘಟಪ್ರಭಾ ದಡದಲ್ಲಿ ಭವ್ಯವಾಗಿರುವ 108 ಅಡಿ ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕುರಿತು ಮಾಹಿತಿ ತರೆಸಿಕೊಂಡು ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಬುಧವಾರ ನಗರದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬಸವೇಶ್ವರರ ಕಂಚಿನ ಮೂರ್ತಿಗೆ ಶಿಲಾನ್ಯಾಸ ನೆವೆರಿಸಿ ಮಾತನಾಡಿದರು. ಘಟಪ್ರಭಾ ದಡದಲ್ಲಿ ಭವ್ಯವಾದ 108 ಅಡಿ ಬಸವಣ್ಣನವರ ಮೂರ್ತಿಯನ್ನು ಮಾಡಬೇಕೆಂದು ಶ್ರೀಗಳ ಆಶಯವಾಗಿದೆ. ಅಲ್ಲದೆ, ಪ್ರಭಾಕರ ಕೋರೆ ಅವರ ಅದರ ಕುರಿತು ಮಾಹಿತಿ ತರಿಸಿ ಶೀಘ್ರದಲ್ಲಿಯೇ ಅದನ್ನು ಅನುಷ್ಠಾನ ಮಾಡಲಾಗುವುದು. ಅದು ವಿಶ್ವಮಟ್ಟದಲ್ಲಿ ಪ್ರವಾಸಿ ತಾಣವನ್ನಾಗಿ ಅದನ್ನು ಮಾಡಲಾಗುವುದು ಎಂದು ತಿಳಿಸಿದರು.

ಬೆಳಗಾವಿಯಲ್ಲಿ ನೂತನವಾಗಿ ಬಸವೇಶ್ವರರ ಮೂರ್ತಿ ಸ್ಥಾಪನೆಯಾಗುತ್ತಿರುವುದು ಸಂತಸದ ಸಂಗತಿ. ಬಸವಣ್ಣನ ಕೆಲಸ ದೇವರ ಕೆಲಸ ಎಂದು ಒಪ್ಪಿಕೊಂಡು ಬಂದಿದ್ದೇನೆ. ನಮ್ಮೇಲರ ಬದುಕಿನಲ್ಲಿ ಹಾಸುಹೊಕ್ಕಿದ್ದಾರೆ. ಅವರ ವಿಚಾರಗಳು ಎಲ್ಲರಿಗೂ ತಿಳಿದಿದೆ. ಅವರು ಮಾಡಿರುವ ಕೆಲಸವನ್ನು ನೋಡಿಗಾದ 12ನೇ ಶತಮಾನದಲ್ಲಿ ಮಾಡಿದ ದೂರದೃಷ್ಠಿ ಇದ್ದದ್ದು ಆಶ್ಚರ್ಯವಾಗುತ್ತದೆ ಎಂದರು.
ಬಸವಣ್ಣನವರು ನಮಗೆ ಸಪ್ತ ಹಾದಿಗಳನ್ನು ನೀಡಿದ್ದಾರೆ. ಬದುಕಿನ ದಾರಿಯನ್ನು ತೋರಿಸಿದ್ದವರು ಅವರು, ವಿಶ್ವದ ಮೊದಲನೇ ಪಾರ್ಲಿಮೆಂಟ್ ಅನುಭವ ಮಂಟಪ. ಜನರಿಂದ ಜನರಿಗೋಸ್ಕರ್ ನಿರ್ಮಾಣವಾಗಿತ್ತು. ಅವರು ತೆಗೆದುಕೊಂಡು ವಿಷಯ ಇಂದಿಗೂ ಪ್ರಸ್ತುವಾಗಿದೆ ಎಂದರು.

ಬಸವಣ್ಣನವರು ಅಸಮಾನತೆಯ ವಿರುದ್ಧ ಹೋರಾಟ ಮಾಡಿದವರು. ಇವುಗಳನ್ನು ಹೊಡೆದು ಹಾಕಲು ನಮ್ಮ ಸಮಾಜದಲ್ಲಿ ಸಾಧ್ಯವಾಗಲಿಲ್ಲ. ವಸ್ತು ನಿಷ್ಠೆಯಾಗಿ ತಿಳಿದುಕೊಂಡು ನಡೆಯಬೇಕು. ಬಸವೇಶ್ವರರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ನಿರಂತರವಾಗಿ ಮಾಡಿಕೊಳ್ಳಬೇಕು ಎಂದರು.

ವಸ್ತು ನಿಷ್ಠೆಯಾಗಿ ಸಮಾಜದಲ್ಲಿರುವ ಸರಿಯಾಗುವ ಕೆಲಸ ಆಗಬೇಕು. ಆಧುನಿಕವಾಗಿ ಅಂದವಾಗಿ ನಿರ್ಮಾಣ ಮಾಡಬಹುದು. ಬಸವಣ್ಣವರು ತತ್ವಗಳನ್ನು ಸಾರುವ ಕೆಲಸವಾಗಬೇಕು. ದೇಶಕ್ಕೆ ದೊಡ್ಡ ಚರಿತ್ರೆ ಇದೆ ಆದರೆ ಬೇಕಾಗಿರುವುದು ಚಾರಿತ್ರ್ಯ, ದೇಶದಲ್ಲಿ ಸಂಘರ್ಷ ಇದೆ. ಬೇಕಾಗಿರುವುದು ಸಮನ್ವಯ ಆದ್ದರಿಂದ ಶ್ರೀಗಳ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ. ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ತೋಂಟದಾರ್ಯ ಜಗದ್ಗುರು ಡಾ. ಸಿದ್ದರಾಮ ಸ್ವಾಮೀಜಿ, ಕಾರಂಜಿಮಠದ  ಗುರುಸಿದ್ದ ಸ್ವಾಮೀಜಿ, ಈ ಸಂದರ್ಭದಲ್ಲಿ ಮೇಯರ್ ಶೋಭಾ ಸೋಮನಾಚೆ,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅನಿಲ್ ಬೆನಕೆ, ದುರ್ಯೋಧನ ಐಹೊಳೆ, ಚನ್ನರಾಜ ಹಟ್ಟಿಹೊಳಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!