ಮಹಾಲಕ್ಷ್ಮಿ ಭೂಶಿ ಅವರಿಗೆ ಡಾಕ್ಟರೇಟ್ ಪದವಿ
ಬೆಳಗಾವಿ : ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಮಹಾಲಕ್ಷ್ಮಿ ಮಹಾನಂದ ಭೂಶಿ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಡಾ. ಶಿವಕುಮಾರ ಕಣಸೋಗಿ ಇವರ ಮಾರ್ಗದರ್ಶನದಲ್ಲಿ ” ಓದುಗರ ಮೇಲೆ ಕನ್ನಡ ಆನ್ ಲೈನ್ ಸುದ್ದಿ ಪೋರ್ಟಲ್ ಗಳ ಪ್ರಭಾವ ಮತ್ತು ಪರಿಣಾಮಗಳು ” ಒಂದು ಅಧ್ಯಯನ ಎಂಬ ಕುರಿತ ಅಧ್ಯಯನ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಈ ಸಾಧನೆಗೆ ತಂದೆ ಮಹಾನಂದ ಭೂಶಿ ಹಾಗೂ ತಾಯಿ ಮಹಾದೇವಿ ಭೂಶಿ ಹಾಗೂ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.