ಗಣೇಶ ಹಬ್ಬಕ್ಕೆ ಸಜ್ಜಾದ ಬೆಳಗಾವಿ ; ಮಂಟಪ ನಿರ್ಮಾಣಕ್ಕೆ ಚಾಲನೆ
ಬೆಳಗಾವಿ : ರಾಜ್ಯದಲ್ಲೇ ಅತ್ಯಂತ ಭರ್ಜರಿಯಾಗಿ ಗಣೇಶ ಹಬ್ಬ ಆಚರಿಸುವ ಬೆಳಗಾವಿ ನಗರದಲ್ಲಿ ಸಧ್ಯ ತಿಂಗಳ ಮುಂಚಿತವಾಗಿಯೇ ಸಿದ್ಧತೆ ಆರಂಭವಾಗಿದ್ದು, ಮಂಟಪ ನಿರ್ಮಾಣಕ್ಕೆ ಮಾಜಿ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದರು.
ಭಾನುವಾರ ನಗರದ ಚಾವಟ್ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯಿಂದ ಸ್ಥಾಪಿಸುವ ಬೆಳಗಾವಿ ರಾಜಾ ಪ್ರತಿಷ್ಠಾಪನಾ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಪಂಚ ಕಮೀಟಿ ಸದಸ್ಯರು, ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.