ಪರೀಕ್ಷೆ ಪಾಸ್ ಮಾಡಿಸುವುದಾಗಿ ಹಣ ಪಡೆದು ತಲೆಮರೆಸಿಕೊಂಡ ಭೂಪ
ಬೆಳಗಾವಿ : ಇಂಜಿನಿಯರಿಂಗ್ ವಿಭಾಗದಲ್ಲಿ ಪೇಲಾದ ವಿಷಯಗಳನ್ನು ಪಾಸ್ ಮಾಡುವುದಾಗಿ ಹೇಳಿ ಹಣ ಪಡೆದ ಪ್ರಕರಣ ಬೆಳಕಿಗೆ ಬಂದಿದ್ದು ಬೆಂಗಳೂರು ಮೂಲದ ವ್ಯಕ್ತಿ ಮೇಲೆ ಆರೋಪ ಮಾಡಲಾಗಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಅನುತ್ತೀರ್ಣರಾದವರಿಗೆ ಹಣದ ಆಮಿಷ ಒಡ್ಡಿ ಪರೀಕ್ಷೆ ಪಾಸ್ ಮಾಡಿಸುತ್ತೇನೆ ಎಂದು ಸುಳ್ಳು ಹೇಳಿದ ವ್ಯಕ್ತಿ ಬೆಂಗಳೂರು ಮೂಲದ ಮಂಜುನಾಥ್ ಎಂಬ ವ್ಯಕ್ತಿ ಮೇಲೆ ಆರೋಪ ಕೇಳಿಬಂದಿದ್ದು, ಕಣ ಕಳೆದುಕೊಂಡವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ನಗರದ ಅನೇಕರಿಂದ ಸಾವಿರಾರು ರೂ. ಹಣ ಪಡೆದು ಸುಳ್ಳು ಹೇಳಿದ್ದಾನೆ. ಈತನ ಕೃತ್ಯದಿಂದ ಅನೇಕರು ಹಣ ಕಳೆದುಕೊಂಡಿದ್ದಾರೆ.