ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಅದ್ದೂರಿ ಶ್ರೀ ಕರೆಮ್ಮಾ ದೇವಿ ಜಾತ್ರಾ ಮಹೋತ್ಸವ
ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀ ಕರೆಮ್ಮಾ ದೇವಿ ಜಾತ್ರಾ ಮಹೋತ್ಸವವು ಭಕ್ತಿ ಭಾವದಿಂದ ಹಾಗೂ ಅದ್ದೂರಿಯಾಗಿ ಜರುಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜಾತ್ರೆಗೆ ಭಕ್ತಿಪೂರ್ವಕ ಚಾಲನೆ ನೀಡಲಾಯಿತು. ಶ್ರೀ ಕರೆಮ್ಮಾ ದೇವಿ ಕಮಿಟಿ ವತಿಯಿಂದ ತಾಯಿ ಕರೆಮ್ಮಾ ದೇವಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ದೇವಸ್ಥಾನದ ಮುಂದೆ ಹುನಗಲ ಹಂದ್ರವನ್ನ ಹಾಕಿ, ಗ್ರಾಮದ ಯುವಕರು ಗುಲಾಲ ಎರಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ಚಾಲನೆ ನೀಡಿದರು.
ಎರಡು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ಅನೇಕ ಸದ್ಭಕ್ತರು ಭಾಗವಹಿಸಿ ದೇವಿಯ ಆಶೀರ್ವಾದ ಪಡೆದು ಪುಣಿತರಾದರು. ಮೊದಲ ದಿನ ಗ್ರಾಮ ದೇವತೆಗೆ ವಿಶೇಷ ಪೂಜೆ ಹಾಗೂ ಬಸವಣ್ಣನಿಗೆ ವಿಶೇಷ ಸಲ್ಲಿಕೆ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.
ಎರಡನೇ ದಿನದ ಅಂಗವಾಗಿ ಸಂಜೆ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಜೊತೆಗೆ ರಂಗೋಲಿ ಸ್ಪರ್ಧೆ,ಉಸುಕಿನ ಮೂಟೆ ಹೊತ್ತು ಸಾಗುವುದು ಸೇರಿದಂತೆ ವಿವಿಧ ಸ್ಪರ್ಧೆಗಳು ಜನರನ್ನು ಆಕರ್ಷಿಸಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೈಲಹೊಂಗಲ ಡಿವೈಎಸ್ ಪಿ ವೀರಯ್ಯಾ ಹಿರೇಮಠ ಹಾಗೂ ಗ್ರಾಮದ ಹಿರಿಯರಾದ ಶ್ರೀಕಾಂತಗೌಡ ಪಾಟೀಲ ಆಗಮಿಸಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವೀರಯ್ಯಾ ಹಿರೇಮಠ ಅವರು ಈಗಿನ ದಿನಮಾನಗಳಲ್ಲಿ ಡಿಜೆ ಹಚ್ಚಿ ಕುಣಿದಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಂದರ್ಭಗಳಲ್ಲಿ ನೀವು ಡಿಜೆ ಬಳಸದೆ ಜಾತ್ರೆ ಮಾಡಿದ್ದಕ್ಕೆ ಕಮೀಟಿಯವರಿಗೆ ಧನ್ಯವಾದ ಸಲ್ಲಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕು ಹಾಗೇಯೆ ನಿಮಗೆ ಏನೇ ಅನ್ಯಾಯ ಆಗಿದ್ದರೂ ಕೂಡಾ ನೇರವಾಗಿ ನನ್ನ ಬಳಿಗೆ ಬನ್ನಿ ಯಾವುದೇ ಮುಖಂಡರನ್ನ ಕರೆತರದೆ ನೇರವಾಗಿ ನನ್ನ ಬಳಿ ಬನ್ನಿ ನಿಮಗೆ ಕಾನೂನಿನಡಿಯಲ್ಲಿ ಸೂಕ್ತ ನ್ಯಾಯ ಕೊಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ್ ಕಲ್ಲೂರ, ಶಿವಾನಂದ ಪೂಜೇರಿ,ಸೋಮು ಕುರುಬರ,ಅಂಬರೀಶ್ ಸೊಗಲನ್ನವರ,ಶಂಕರಗೌಡ ಪಾಟೀಲ,ಕರೆಪ್ಪಾ ಹಲಗಿ,ಗಂಗಪ್ಪ ಕುಂಬಳಿ,ಪ್ರಕಾಶ,ನಾಗೇಶ, ಸಂತೋಷ,ಶಿವಾನಂದ, ಸದಾನಂದ,ರವಿ,ಮಲ್ಲೇಶ, ಸಿದ್ದಪ್ಪಾ,ಚಂದ್ರು,ಮನೋಜ, ಸೇರಿ ದೇವಸ್ಥಾನ ಕಮೀಟಿ ಸರ್ವ ಸದಸ್ಯರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.


