ಅಥಣಿ : ಜೈನ ಸಮಾಜದ ಪ್ರಭಾವಿ ಮುಖಂಡ ಕಿರಣಕುಮಾರ್ ಪಾಟೀಲ್ ನಿಧನ
ಅಥಣಿ : ಹಿರಿಯ ರಾಜಕಾರಣಿ ಹಾಗೂ ಜೈನ ಸಮಾಜದ ಪ್ರಭಾವಿ ಮುಖಂಡರಾಗಿದ್ದ ಕಿರಣಕುಮಾರ್ ಪಾಟೀಲ್ (62) ಹೃದಯಾಘಾತದಿಂದ ಗುರುವಾರ ಸಂಜೆ ನಿಧನರಾಗಿದ್ದಾರೆ.
ಮೂಲತಃ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದ ಕಿರಣಕುಮಾರ್ ಪಾಟೀಲ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ನಾಲ್ಕು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಇವರು ಜೈನ ಸಮುದಾಯದ ಪ್ರಭಾವಿ ಮುಖಂಡರಾಗಿದ್ದರು.
ಮೃತರು ಅಥಣಿ ತಾಲೂಕಿನ ನಂದಗಾಂವ ಗ್ರಾಮದವರಾಗಿದ್ದು ಸ್ವ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಲಿದೆ.