ವೆಲ್ಸಮ್ (WELSOME) ಸಾವಯವ ಬೆಲ್ಲದ ಕಾರ್ಖಾನೆ ಲೋಗೋ ಉದ್ಘಾಟನೆ
ಬೆಳಗಾವಿ : ವೆಲ್ಸಮ್ WELSOME ಸಾವಯವ ಬೆಲ್ಲದ ಕಾರ್ಖಾನೆ ಲೋಗೋ ಹಾಗೂ ಪರಿಚಯಪತ್ರವನ್ನು ಗದಗ ತೋಂಟದಾರ್ಯ ಸಂಸ್ಥಾನ ಮಠದ, ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಉದ್ಘಾಟಿಸಿದರು.
ಶುಕ್ರವಾರ ನಗರದ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ. ಅಥಣಿ ತಾಲೂಕಿನಲ್ಲಿ ನಿರ್ಮಾಣವಾಗಲಿರುವ ಸಾವಯವ ಬೆಲ್ಲದ ಕಾರ್ಖಾನೆಯ ವೆಲ್ಸಮ್ ( WELSOME ) ಸಂಸ್ಥೆಯ ಲೋಗೋ ಲಾಂಚ್ ಉದ್ಘಾಟಿಸಿ ಮಾತನಾಡಿದ ಇವರು. ರಸಾಯನಿಕ ಪದಾರ್ಥಗಳ ಬಳಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜೊತೆಗೆ ಕಾಂಕ್ರೀಟ್ ಕಾಡುಗಳಿಂದ ಭೂಮಿ ತನ್ನ ಸಮತೋಲನ ಕಳೆದುಕೊಳ್ಳುತ್ತಿದ್ದು, ನಮ್ಮ ಪರಿಸರ ಉಳಿದುವ ಕೆಲಸ ಎಲ್ಲರೂ ಮಾಡಬೇಕು. ಸಾವಯವ ಪದಾರ್ಥ ತಯಾರಿಸುವ ಉದ್ದೇಶದಿಂದ ಅಥಣಿ ತಾಲೂಕಿನಲ್ಲಿ ಪ್ರಾರಂಭವಾಗಲಿರುವ ಸಾವಯವ ಬೆಲ್ಲದ ಕಾರ್ಖಾನೆಯಿಂದ ರೈತರ ಬಾಳು ಬೆಳಗುವಂತಾಗಲಿ ಎಂದರು.
ಶೇಗುಣಸಿ ವಿರಕ್ತಮಠದ ಮಹಾಂತ ದೇವರು ಮಾತನಾಡಿ. ಪ್ರಸ್ತುತ ದಿನಮಾನಗಳಲ್ಲಿ ಆರೋಗ್ಯವೇ ಮೂಲವಾಗಿದ್ದು, ಸಾವಯವ ಕೃಷಿಯನ್ನು ಉತ್ತೇಜಿಸಿ ಆರೋಗ್ಯಕರ ದೇಶ ನಿರ್ಮಾಣಕ್ಕೆ ಯುವಕರು ಕಾಯಕಲ್ಪ ಮಾಡಿದ್ದು ಸಂತೋಷ. ಅಥಣಿ ತಾಲೂಕಿನಲ್ಲಿ ಸಾವಯವ ಬೆಲ್ಲ ತಯಾರಿಸುವ ಕಾರ್ಖಾನೆ ಪ್ರಾರಂಭ ಮಾಡುತ್ತಿರುವುದು ಸಂತೋಷದ ವಿಷಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಮಹಾಂತೇಶ ವಕ್ಕುಂದ. ಇವತ್ತಿನ ದಿನಮಾನಗಳಲ್ಲಿ ಸಾವಯವ ಕೃಷಿ ಪದಾರ್ಥಗಳು ಜನರಿಗೆ ತಲುಪಿಸುವ ಕಾರ್ಯ ವೇಗದಿಂದ ಸಾಗಬೇಕಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುಲು, ವೆಲ್ಸಮ್ ( WELSOME ) ಸಾವಯವ ಕಾರ್ಖಾನೆ ಪ್ರಾರಂಭವಾಗುತ್ತಿರುವುದು ಸಂತೋಷದಾಯವಾಗಿದ್ದು ಇದು ಎತ್ತರಕ್ಕೆ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾ ಸ್ವಾಮೀಜಿ, ಸಾವಯವ ಕೃಷಿ ಪಂಡಿತ, ಹಣುಮಂತ ಹಲ್ಕಿ, ವೆಲ್ಸಮ್ ಸಂಸ್ಥೆ ಮುಖ್ಯಸ್ಥ ಸುರೇಶ್ ನಾರಪ್ಪಗೊಳ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.