ರಾಜ್ಯದಲ್ಲಿ ಮತ್ತೊಂದು ಅವಘಡ : ಕೃಷ್ಣಾ ನದಿಯಲ್ಲಿ ಮುಳುಗಿ ನಾಲ್ವರ ಸಾವು
ಬಾಗಲಕೋಟೆ : ನದಿಯಲ್ಲಿ ಮುಳುಗಿ ಸಾವನಪ್ಪಿದ್ದ ವ್ಯಕ್ತಿಯ ಮೃತದೇಹ ಹುಡುಕಲು ಹೋಗಿ ಮತ್ತೇ ಮೂವರ ಜಲ ಸಮಾಧಿಯಾದ ಘಟನೆ ಜಿಲ್ಲೆಯ ಧನ್ನೂರ ಗ್ರಾಮದ ಕೃಷ್ಣಾ ನದಿಯಲ್ಲಿ ಸಂಭವಿಸಿದೆ.
ಎರಡು ದಿನಗಳ ಹಿಂದೆ ನದಿಗೆ ಬಿದ್ದಿದ್ದ ಶಿವಪ್ಪ ಎಂಬುವವರ ಮೃತದೇಹ ಹುಡುಕಲು ಹೋಗಿದ್ದ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರನಾಳ ಗ್ರಾಮದ. ಶರಣಪ್ಪ, ಯಮನಪ್ಪ ಮತ್ತು ಪರಸಪ್ಪ ಎಂಬುವರ ಬೋಟ್ ಗೆ ವಿದ್ಯುತ್ ತಂತಿ ತಗುಲಿದ್ದ ಪರಿಣಾಮ ಮೂವರು ಸಾವನಪ್ಪಿರುವ ಘಟನೆ ನಡೆದಿದೆ.
ಹುನಗುಂದ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.