ಡಿಕೆ ಸಂಪುಟದಲ್ಲಿ ನೂತನ ಸಚಿವರ ಲಿಸ್ಟ್ ಇಲ್ಲಿದೆ..! ಡಿಸಿಎಂ ಯಾರು..?

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ಯಾರೆಲ್ಲಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.
ಡಿಕೆಶಿ ಸಂಪುಟದಲ್ಲಿ ಮೊದಲ ಹಂತದಲ್ಲಿ 12 ರಿಂದ ಹದಿನೈದು ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ ಬಹುತೇಕರು ಸಿದ್ದರಾಮಯ್ಯ ಸಂಪುಟದ ಸಚಿವರಾಗಿದ್ದರೆ ಇನ್ನುಳಿದ ಒಂದಿಬ್ಬರು ಹೊಸ ಮುಖಗಳಿವೆ.
ಇಂದು ನಡೆಯಲಿರುವ ಪ್ರಮಾಣಚನ ಕಾರ್ಯಕ್ರಮದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರು ಯಾರೆಲ್ಲಾ ಎಂದರೆ. ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಚಲುವರಾಯಸ್ವಾಮಿ, ಕೆ.ಜೆ ಜಾರ್ಜ್, ಯು.ಟಿ ಖಾದರ್, ಕೆ.ಹೆಚ್. ಮುನಿಯಪ್ಪ, ಪ್ರಿಯಾಂಕ ಖರ್ಗೆ, ಬೈರತಿ ಸುರೇಶ್, ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ್, ಇನ್ನೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರೂ ಸಂಪುಟಕ್ಕೆ ಬರುವ ಸಾಧ್ಯತೆ ಇದೆ.
ಡಿಸಿಎಂ ಸ್ಥಾನ ಪರಮೇಶ್ವರ ಅವರಿಗೆ : ಡಿಕೆಶಿ ಸಂಪುಟದಲ್ಲಿ ಡಾ. ಜಿ ಪರಮೇಶ್ವರ ಅವರನ್ನು ಏಕೈಕ ಡಿಸಿಎಂ ಆಗಿ ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೈಕಮಾಂಡ್ ನಾಯಕರು ಸುದೀರ್ಘ ಚರ್ಚೆ ನಡೆಸಿ ಪರಮೇಶ್ವರ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

