ಬೆಳಗಾವಿ : ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಸವದತ್ತಿ ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಅವರನ್ನು ಭೇಟಿಯಾಗಿ ವಿಜಯೇಂದ್ರ ಆರೋಗ್ಯ ವಿಚಾರಿಸಿದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿರೂಪಾಕ್ಷ ಮಾಮನಿ ಅವರ ಆರೋಗ್ಯ ವಿಚಾರಿಸಿ ಭಗವಂತನ ಕೃಪೆಯಿಂದ ವಿರೂಪಾಕ್ಷ ಅವರ ಆರೋಗ್ಯದಲ್ಲಿ ತುಂಬಾ ಚೇತರಿಕೆ ಕಂಡು ಬಂದಿದ್ದು,ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲಾ, ಶೀಘ್ರದಲ್ಲಿಯೇ ಅವರು ಕ್ಷೇತ್ರದ ಜನತೆಯ ಸೇವೆಯಲ್ಲಿ ತೊಡೆಗಿಸಿ ಕೊಳ್ಳುವ ವಿಶ್ವಾಸವಿದೆ ಎಂದರು.