
ನೀಟ್ ಪರೀಕ್ಷೆಯಲ್ಲಿ ಕೆಎಲ್ಇ ಸಂಸ್ಥೆ ವಿದ್ಯಾರ್ಥಿಗಳ ಸಾಧನೆ ಗಮನಾರ್ಹ : ಮಹಾಂತೇಶ್ ಕವಠಗಿಮಠ

ಬೆಳಗಾವಿ : ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಕೆಎಲ್ಇ ಸಂಸ್ಥೆಯ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ ಎಂದು ಕೆಎಲ್ಇ ನಿರ್ದೇಶಕ, ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಿಇಟಿ ಪರೀಕ್ಷೆ ನಡೆಸಿದ್ದು ಮೊದಲಿಗೆ ಕರ್ನಾಟಕ. ಕರ್ನಾಟಕ ವಿದ್ಯಾರ್ಥಿಗಳಿಗೆ ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಮಕೃಷ್ಣ ಹೆಗಡೆ ಅವರು ಜಾರಿಗೆ ತಂದರು. ಇದರಿಂದ ಭಾರತದ ವಿದ್ಯಾರ್ಥಿಗಳು ಕರ್ನಾಟಕದತ್ತ ಮುಖ ಮಾಡ ತೋಡಗಿದರು ಎಂದರು.
ಕರ್ನಾಟಕ ಭಾರತದ ಶೈಕ್ಷಣಿಕ ಕ್ಷೇತ್ರವಾಗಿದೆ. ಜೆಇ ಪ್ರವೇಶ ಮಾಡದೆ ಇರುವುದನ್ನು ಕೆಎಲ್ಇ ಗಮನಿಸಿ ಕಳೆದ 2013 ರಲ್ಲಿ ನೀಟ್ ಪ್ರವೇಶ ಪರೀಕ್ಷೆಗೆ ಹೆಚ್ಚು ಮಹತ್ವ ಬಂದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಕೂಲವಾಗಿದೆ ಎಂದರು.
36 ಪಿಯುಸಿಯಲ್ಲಿ 17 ಅನುದಾನ, 19 ಅನುದಾನ ರಹಿತ ಕಾಲೇಜುಗಳು ಕೆಎಲ್ಇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಳಗಾವಿ, ಧಾರವಾಡ, ಚಿಕ್ಕೋಡಿ, ನಿಪ್ಪಾಣಿ, ಗೋಕಾಕ, ರಾಯಬಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಇಂಡಿಪೆಂಡೆಂಟ್ ಕಾಲೇಜು ಸ್ಥಾಪನೆ ಮಾಡಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.
ನೀಟ್ ಪ್ರವೇಶ ಪರೀಕ್ಷೆ ಕೇವಲ ವೈದ್ಯಕೀಯಕ್ಕೆ ಮಾತ್ರವಲ್ಲ. ಬಿಎಚ್ ಎಮ್‌ಎಸ್ ಕಾಲೇಜಿಗೂ ಅನಕೂಲವಾಗುತ್ತದೆ. ಪೋಷಕರು ಆತಂಕದಿಂದ ಹೊರ ಬರಬೇಕು. ಪ್ರವೇಶ ಪರೀಕ್ಷೆಯಲ್ಲಿ ಮಕ್ಕಳನ್ನು ಸಿದ್ದಮಾಡುವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಬೇಕು ಎಂದು ವಿನಂತಿಸಿಕೊಂಡರು.
ನೀಟ್ ಪರೀಕ್ಷೆಯಲ್ಲಿ ಕೆಎಲ್ಇ ಸಂಸ್ಥೆಯ ಸುಮಾರು 65 ವಿದ್ಯಾರ್ಥಿಗಳು 400ಕ್ಕೂ ಅಧಿಕ ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅವರಿಗೆ ಡಾ.ಪ್ರಭಾಕರ ಕೋರೆ ಸೇರಿದಂತೆ ಎಲ್ಲರೂ ಅಭಿನಂದನೆಗಳು ತಿಳಿಸಿದ್ದಾರೆ ಎಂದರು.
ಕೆಎಲ್ಇ ಇಂಡಿಪೆಂಡೆಂಟ್ ಕಾಲೇಜನಲ್ಲಿ ಅತ್ಯುತ್ತಮ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದರು.
ಡಾ. ಜಲಾಪುರೆ, ಸತೀಶ ಎಂ.ಪಿ, ಪ್ರೊ. ನಂಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.