ಕೊನೆಗೂ ಜನಾರ್ದನ ರೆಡ್ಡಿ ವನವಾಸ ಅಂತ್ಯ ; 13 ವರ್ಷಗಳ ನಂತರ ಬಳ್ಳಾರಿಗೆ ರೆಡ್ಡಿಗಾರು
ಬೆಂಗಳೂರು : ಕಳೆದ ಹದಿಮೂರು ವರ್ಷಗಳ ಹಿಂದೆ ಅಂದಿನ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶ ನಿಷೇಧ ಇಂದು ಅಂತ್ಯವಾಗಿದ್ದು, ಬಳ್ಳಾರಿ ಪ್ರವೇಶಕ್ಕೆ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ.
ಜನಾರ್ದನ ರೆಡ್ಡಿ ಹುಟ್ಟಿ ಬೆಳೆದಿದ್ದ ಬಳ್ಳಾರಿ ಭೂಮಿಗೆ ಕಾಲಿಡದಂತೆ ಕೋರ್ಟ್ ಅಂದು ಆದೇಶ ನೀಡಿತ್ತು. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ರೆಡ್ಡಿ ಜೈಲು ಸೇರಿದ್ದರು. ಅಂದಿನ ಯಡಿಯೂರಪ್ಪ ಸರ್ಕಾರದಲ್ಲಿ ರೆಡ್ಡಿ ಸಚಿವರಾಗಿದ್ದರು.
ಆದರೆ ಅಕ್ರಮ ಗಣಿ ಆರೋಪದಲ್ಲಿ ಸಿಲುಕಿ ಮೂರುವರೆ ವರ್ಷ ಜೈಲು ಸೇರಿದ್ದರು.
ಕರ್ನೂಲ್, ಬಳ್ಳಾರಿ ಹಾಗೂ ಅನಂತಪುರ ಕ್ಕೆ ರೆಡ್ಡಿ ಪ್ರವೇಶಕ್ಕೆ ನಿರ್ಭದ ಹೇರಲಾಗಿತ್ತು. ಸಧ್ಯ ರೆಡ್ಡಿ ಬಳ್ಳಾರಿಗೆ ಹೋಗುವಂತೆ ಹೈಕೋರ್ಟ್ ಆದೇಶ ನೀಡಿದೆ. ಇನ್ನೂ ತವರೂರಿಗೆ ಬರಲು ರೆಡ್ಡಿ ಕಾತರರಾಗಿದ್ದಾರೆ. ಅಷ್ಟೇ ಅಲ್ಲದೆ ಅವರ ಈ ಪರಿಸ್ಥಿತಿಗೆ ಇಂದಿನ ಸಿಎಂ ಸಿದ್ದರಾಮಯ್ಯ ಅವರೂ ಕಾರಣ ಎಂದು ರಡ್ಡಿ ನಂಬಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜನಾರ್ದನ ರೆಡ್ಡಿ.
ಭಗವಂತನ ಆಶಿರ್ವಾದದಿಂದ ಕಷ್ಟದ ದಿನ ದೂರ ಹೋಗಿ ಒಳ್ಳೆಯ ದಿನ ಬಂದಿದೆ. ನನ್ನ ವಿಧಿಯಲ್ಲಿ ಬರೆದಿದ್ದು ನಡೆದಿದೆ. ನವರಾತ್ರಿಯ ಮೊದಲ ದಿನ ಬಳ್ಳಾರಿ ನೆಲಕ್ಕೆ ಕಾಲಿಡುತ್ತೇನೆ.
ಅಂದಿನ ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಇಲ್ಲ ಸಲ್ಲದ ವಿರುದ್ಧ ಆರೋಪ ಮಾಡಿದ್ದರು. ಇಂದು ಅವರೇ ಸಿಎಂ ಇರುವಾಗಲೇ ನಾನು ಬಳ್ಳಾರಿ ನೆಲಕ್ಕೆ ಕಾಲಿಡುತ್ತಿದ್ದೇನೆ ಎಂದು ಗುಡುಗಿದ್ದರು.
ನನ್ನೂರಿನಲ್ಲಿ ದುರ್ಗಿ ಇದ್ದಾಳೆ. ಮೈಸೂರಿನಲ್ಲಿ ಚಾಮುಂಡೇಶ್ವರಿ ಇದ್ದಾಳೆ. ನನ್ನನ್ನು ಸ್ವತಃ ದುರ್ಗಾದೇವಿ ಕರೆಸಿಕೊಳ್ಳುತ್ತಿದ್ದಾಳೆ. ಮುಡಾ ಪ್ರಕರಣದಲ್ಲಿ ತಾಯಿ ಚಾಮುಂಡಿ ಸಿದ್ದುಗೆ ತಕ್ಕ ಪಾಠ ಕಲಿಸುತ್ತಾಳೆ ಎಂದು ರೆಡ್ಡಿ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.