ಬೆಳಗಾವಿ : ಮತದಾರರಿಗೆ ಹಂಚಲು ತಂದಿಟ್ಟಿದ್ದ ಕುಕ್ಕರ್ ಹಾಗೂ ಹೊಲಿಗೆ ಯಂತ್ರ ವಶ
ಯರಗಟ್ಟಿ: ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ಹಾಗೂ ಹೊಲಿಗೆ ಯಂತ್ರ ತರಲಾಗಿದೆ ಎಂಬ ಮಾಹಿತಿ ಮೇರೆಗೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ತಂಡವು ಕಾರ್ಯಾಚರಣೆ ನಡೆಸಿ ಯರಗಟ್ಟಿ ಗೋದಾಮಿಫನಲ್ಲಿ ದಾಸ್ತಾನು ಮಾಡಲಾಗಿದ್ದ ಕುಕ್ಕರ್ ಹಾಗೂ ಹೊಲಿಗೆ ಯಂತ್ರಗಳನ್ನು ವಶಪಡಿಸಿಕೊಂಡಿದೆ.
‘ಫ್ಯಾಕ್ಟರಿಯವರು ವಿಳಾಸದಲ್ಲಿ ನಮೋದಿಸದೆ. ಪಟ್ಟಣಶೆಟ್ಟಿ ಎಂದು ಹೆಸರು ನಮೂದಿಸಿದ್ದಾರೆ.
ಈ ಎಲ್ಲಾ ಸಾಮಗ್ರಿಗಳು ಬಸವರಾಜ ಪಟ್ಟಶೆಟ್ಟಿಯವರಿಗೆ ಸೇರಿದ್ದು ಎನ್ನಲಾಗಿದೆ. ಇವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಲಭ್ಯವಾಗದ ಕಾರಣ ಕುಕ್ಕರ್ ಹಾಗೂ ಹೊಲಿಗೆ ಯಂತ್ರಗಳನ್ನು ವಶಕ್ಕೆ ಪಡೆದು, ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ತಂಡವು ಅಧಿಕಾರಿ ಎಸ್. ಎ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಯರಗಟ್ಟಿ ತಹಶೀಲ್ದಾರ ತಹಶೀಲ್ದಾರ ಚಂದ್ರಶೇಖರ ನಾಯ್ಕ ಮುರಗೋಡ ಸಿಪಿಐ ಮೌನೇಶ್ವರ ಮಾಲಿಪಾಟೀಲ, ಯರಗಟ್ಟಿ ಪಿಎಸ್ಐ ಆಯ್. ಎಮ್. ಹಿರೇಗೌಡರ, ಮುರಗೋಡ ಪಿಎಸ್ಐ ಚೆನ್ನಯ್ಯ ದೇವೂರ, ಪ. ಪಂ. ಮುಖ್ಯಾಧಿಕಾರಿ ಕೆ. ಬಿ. ಬೆಣ್ಣಿ ಇದ್ದರು.