ಕಾಗವಾಡ – ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದ ಬ್ಯಾನರ್ ನಲ್ಲಿ ಕನ್ನಡ ಕಗ್ಗೊಲೆ
ಕಾಗವಾಡ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಗವಾಡ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆದ ಫಲಾನುಭವಿಗಳ ಸಮಾರಂಭದ ಬ್ಯಾನರ್ ನಲ್ಲಿ ಕನ್ನಡ ಅಕ್ಷರಗಳ ಕಗ್ಗೊಲೆ ನಡೆದಿದೆ.
ಹೌದು ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಪ್ರತಿನಿಧಿಸುವ ಕಾಗವಾಡ ವಿಧಾನಸಭೆ ವ್ಯಾಪ್ತಿಯಲ್ಲಿ ನಡೆದ ಫಲಾನುಭವಿಗಳ ಸಭೆಯಲ್ಲಿ ಅಳವಡಿಸಿದ್ದ ಬ್ಯಾನರ್ ನಲ್ಲಿ ಕನ್ನಡ ಅಕ್ಷರಗಳನ್ನು ತಪ್ಪಾಗಿ ಬರೆದಿದ್ದರು. ಕರ್ನಾಟಕ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ ವನ್ನು “ ಅಣ್ಣಭಾಗ್ಯ ”ಹಾಗೂ ಜಲ ಜೀವನ ಮಿಷನ್ ಅನ್ನು “ ಜಲ ಜೀವನ ಮಿಷಣ ” ಎಂದು ಕಿಸಾನ್ ಸಮ್ಮಾನ್ ಯೋಜನೆಯನ್ನು ಕಿಸಾನ್ ಸನ್ಮಾನ ಎಂದು ಬರೆಯುವ ಮೂಲಕ ಕನ್ನಡದ ಕಗ್ಗೊಲೆ ನಡೆದಿದೆ.
ಇನ್ನೂ ಈ ಸಮಾರಂಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕ ಮಹೇಶ್ ಕುಮಠಳ್ಳಿ, ಶಾಸಕ ಶ್ರೀಮಂತ ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.