ಹದಗೆಟ್ಟ ರಸ್ತೆ ಕುರಿತು ಪ್ರಶ್ನೆ ಕೇಳಿದ ಯುವಕನ ಮೇಲೆ FIR ಮಾಡಿ ಎಂದ ಶಾಸಕ ಪಿ. ರಾಜೀವ್
ಕಾಂಗ್ರೆಸ್ ಕಾರ್ಯಕರ್ತನನ್ನು ವಶಕ್ಕೆ ಪಡೆದ ಪೊಲೀಸರು
ಶಾಸಕ ಪಿ. ರಾಜೀವ್ ವರ್ತನೆಗೆ ಸಾರ್ವಜನಿಕರ ಆಕ್ರೋಶ
ಕುಡಚಿ : ಕುಡಚಿ ಮತಕ್ಷೇತ್ರದ ಶಾಸಕ ಪಿ. ರಾಜೀವ್ ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿಗಳನ್ನು ಸುಧಾರಿಸುವಂತೆ ಆಗ್ರಹಿಸಿದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ FIR ಹಾಕುವಂತೆ ಶಾಸಕ ಪಿ. ರಾಜೀವ್ ಸೂಚನೆ ನೀಡಿದ ಘಟನೆ ಹಿಡಕಲ್ ಗ್ರಾಮದಲ್ಲಿ ನಡೆದಿದೆ.
ಹಾರೂಗೇರಿ ಪಟ್ಟಣದ ಸಮೀಪದಲ್ಲಿರುವ ಬಸ್ತವಾಡ ಗ್ರಾಮದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಹಾಗೂ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಯುವಕ ಪ್ರಶ್ನಿಸುತ್ತಾನೆ. ಇದ್ದಕ್ಕೆ ಗರಂ ಆದ ಶಾಸಕ ಪಿ. ರಾಜೀವ್ ಅವನ ಮೇಲೆ ಕೇಸ್ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡುತ್ತಾದರೆ. ಇತ್ತ ಯುವಕ ಪ್ರತಿಭಟಿಸುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಡಕಲ್ ಗ್ರಾಮದಲ್ಲಿ ಬಿಜೆಪಿ ಪಕ್ಷದ ಕುಡಚಿ ಮಂಡಲ ಪಿ. ರಾಜೀವ್ ಅವರ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕುಡಚಿ ಕ್ಷೇತ್ರದ ರಸ್ತೆಗಳು ಕಳಪೆಯಾಗಿರುವ ಬಗ್ಗೆ ಸಾಮಾಜಿಕ ಹೋರಾಟಗಾರರು ಕೆಲವು ಪ್ರಶ್ನೆ ಮಾಡಿದ್ದಾರೆ. ಶಾಸಕ ಪಿ ರಾಜೀವ್ ಅವರ ಪ್ರಶ್ನೆಗೆ ಗರಂ ಆಗಿ ಹೋರಾಟಗಾರರ ಮೇಲೆ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಶಾಂತತೆಯಿಂದ ಕ್ಷೇತ್ರದ ರಸ್ತೆ ಅಭಿವೃದ್ಧಿ ಬಗ್ಗೆ ಪ್ರಶ್ನೆ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರರನ್ನು ಬಂಧಿಸುವಂತೆ ಆದೇಶ ನೀಡಿದ್ದಾರೆ.
ಶಾಸಕ ಪಿ. ರಾಜೀವ್ ಅವರ ನಡೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ.